ಮನೆ ರಾಷ್ಟ್ರೀಯ ರಾಹುಲ್‌ ಗಾಂಧಿ ಕಚೇರಿಗೆ ನುಗ್ಗಿ ದಾಂಧಲೆ: 8 ಮಂದಿ ವಶಕ್ಕೆ

ರಾಹುಲ್‌ ಗಾಂಧಿ ಕಚೇರಿಗೆ ನುಗ್ಗಿ ದಾಂಧಲೆ: 8 ಮಂದಿ ವಶಕ್ಕೆ

0

ವಯನಾಡ್‌ (Wayanad): ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರ ಕಚೇರಿಗೆ ಪ್ರತಿಭಟನಕಾರರ ಗುಂಪು ಸಂಸದರ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

ಕೇರಳದ ಆಡಳಿತಾರೂಢ ಸಿಪಿಎಂನ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಪ್ರತಿಭಟನೆ ನಡೆಸಿದ್ದು, ಕೆಲವರು ಸಂಸದರ ಕಚೇರಿಗೆ ನುಗ್ಗಿದ್ದಾರೆ.

ಈ ಸಂಬಂಧ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಕಚೇರಿಯ ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದ ಗುಡ್ಡಗಾಡು ಪ್ರದೇಶಗಳ ಅರಣ್ಯದಲ್ಲಿ ಬಫರ್‌ ವಲಯ ರಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸುವಲ್ಲಿ ರಾಹುಲ್‌ ಗಾಂಧಿ ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಎಸ್‌ಎಫ್‌ಐ ಪ್ರತಿಭಟನೆ ನಡೆಸಿದೆ.

ರಾಹುಲ್‌ ಗಾಂಧಿ ಅವರ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿರುವ ಪ್ರಕರಣವನ್ನು ಖಂಡಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಇಂತಹ ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆದುಕೊಳ್ಳುವುದು ತಪ್ಪು ಪ್ರವೃತ್ತಿ ಎಂದು ಅವರು ಹೇಳಿದ್ದಾರೆ.