ಮನೆ ರಾಷ್ಟ್ರೀಯ ಹಡಗಿನಿಂದ ಭೇದಿಸುವ ಕ್ಷಿಪಣಿ ಪರೀಕ್ಷೆ ಯಶಸ್ವಿ

ಹಡಗಿನಿಂದ ಭೇದಿಸುವ ಕ್ಷಿಪಣಿ ಪರೀಕ್ಷೆ ಯಶಸ್ವಿ

0

ಒಡಿಶಾ (Odisha): ಹಡಗಿನಿಂದ ಭೇದಿಸುವ ಮೇಲ್ಮೈ ವಾಯು ದಾಳಿ ಕ್ಷಿಪಣಿ (ವಿಎಲ್‌–ಎಸ್‌ಆರ್‌ಎಸ್‌ಎಎಂ) ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.

ಕ್ಷಿಪಣಿ (ವಿಎಲ್‌–ಎಸ್‌ಆರ್‌ಎಸ್‌ಎಎಂ) ಪರೀಕ್ಷೆಯನ್ನು ಡಿಆರ್‌ಡಿಒ ಮತ್ತು ಭಾರತೀಯ ನೌಕಾಪಡೆ ಒಡಿಶಾದ ಕರಾವಳಿಯ ಚಾಂಡಿಪುರದ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ (ಐಟಿಆರ್‌) ಯಶಸ್ವಿಯಾಗಿ ನಡೆಸಿವೆ.

ಡಿಆರ್‌ಡಿಒ ಮತ್ತು ಭಾರತೀಯ ನೌಕಾಪಡೆಯ ಈ ಯೋಜನೆಯ ಯಶಸ್ವಿಗೆ ಅಭಿನಂದಿಸಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಇದು ಶತ್ರುಗಳ ವೈಮಾನಿಕ ಬೆದರಿಕೆಗಳ ವಿರುದ್ಧ ಭಾರತೀಯ ನೌಕಾಪಡೆಯ ಹಡಗುಗಳ ರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆಎಂದು ಅವರು ಟ್ವೀಟ್ ಮಾಡಿದ್ದಾರೆ.

ವಿಎಲ್‌–ಎಸ್‌ಆರ್‌ಎಸ್‌ಎಎಂ (ವರ್ಟಿಕಲ್ ಲಾಂಚ್ ಶಾರ್ಟ್‌ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ ಕ್ಷಿಪಣಿ) ಹಡಗಿನಿಂದ ಉಡಾಯಿಸುವ ಕ್ಷಿಪಣಿ ವ್ಯವಸ್ಥೆಯಾಗಿದೆ. ಇದು ಸಾಗರದೊಳಗೆ ಎದುರಾಗುವ ದಾಳಿಗಳನ್ನು ಮತ್ತು ವಾಯು ಪ್ರದೇಶದಲ್ಲಿ ತೀರಾ ಸನಿಹದಲ್ಲಿ ಎದುರಾಗುವ ವೈಮಾನಿಕ ದಾಳಿಯ ಗುರಿಗಳನ್ನು ನಾಶಪಡಿಸುತ್ತದೆ.

ಅತಿ ವೇಗದ ವೈಮಾನಿಕ ಗುರಿಯನ್ನು ಪರೀಕ್ಷಾರ್ಥ ವಿಮಾನದ ವಿರುದ್ಧ ಈ ಕ್ಷಿಪಣಿಯನ್ನು ನೌಕಾಪಡೆಯ ಹಡಗಿನಿಂದ ಉಡಾವಣೆ ಮಾಡಲಾಯಿತು. ಅದು ತನ್ನ ಗುರಿಯನ್ನು ಯಶಸ್ವಿಯಾಗಿ ಭೇದಿಸಿತು. ಡಿಆರ್‌ಡಿಒ ಮತ್ತು ನೌಕಾಪಡೆಯ ಹಿರಿಯ ಅಧಿಕಾರಿಗಳು ಹಲವು ಟ್ರ್ಯಾಕಿಂಗ್ ಉಪಕರಣಗಳನ್ನು ಬಳಸಿಕೊಂಡು, ಕ್ಷಿಪಣಿ ಉಡಾವಣೆಯ ಮೇಲ್ವಿಚಾರಣೆ ನಿರ್ವಹಿಸಿದರು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.