ಮನೆ ಮನರಂಜನೆ ಬಿದ್ದು ಕಾಲು ಮುರಿದುಕೊಂಡ ಹಿರಿಯ ನಟ ಉಮೇಶ್

ಬಿದ್ದು ಕಾಲು ಮುರಿದುಕೊಂಡ ಹಿರಿಯ ನಟ ಉಮೇಶ್

0

ಕನ್ನಡದ ಹಿರಿಯ ನಟ ಉಮೇಶ್ ವಯೋ ಸಹಜ ತೊಂದರೆಗಳಿಂದ ಬಳಲುತ್ತಿದ್ದಾರೆ. ಇಂಥಹ ಕಷ್ಟದ ಹೊತ್ತಲ್ಲೇ ಅವರು ಮನೆಯಲ್ಲೇ ಬಿದ್ದು ಕಾಲು ಮುರಿದುಕೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ಮನೆಯಲ್ಲೇ ಜಾರಿ ಬಿದ್ದ ಉಮೇಶ್ ನೋವಿನಿಂದಾಗಿ ಪ್ರಜ್ಞೆ ತಪ್ಪಿದ್ದರು. ಕೂಡಲೇ ಅವರನ್ನು ಮುದ್ದಿನಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇದೀಗ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹಿರಿಯ ನಟ ಉಮೇಶ್ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟರಾಗಿ, ಐದು ದಶಕದಿಂದ ಬಣ್ಣ ಹಚ್ಚುತ್ತಿರುವ ಕಲಾವಿದ. ಇದೀಗ ಇಳಿ ವಯಸ್ಸಿನಲ್ಲಿ ಕಾಲಿಗೆ ಫ್ರ್ಯಾಕ್ಟರ್‌ ಮಾಡಿಕೊಂಡು ನರಳುತ್ತಿದ್ದಾರೆ. ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದ ಕಾರಣ ಕಲಾವಿದರ ಸಂಘದ ಮೊರೆ ಹೋಗಿದ್ದಾರೆ ಉಮೇಶ್.

ಈ ವಯಸ್ಸಿನಲ್ಲೂ ಅವರು ನಟನೆಯ ತೊರೆದಿಲ್ಲ. ಆದರೆ ಮುಂದಿನ ಸ್ಥಿತಿ ಏನು ಅನ್ನೋ ಚಿಂತೆ ಅವರಿಗೂ ಕುಟುಂಬಸ್ಥರಿಗೂ ಎದುರಾಗಿದೆ. ಸದ್ಯಕ್ಕೀಗ ಕಾಲಿಗೆ ಆಪರೇಷನ್ ಮಾಡಬೇಕಾಗಿ ಬಂದಿದೆ. ವಿಶ್ರಾಂತಿ ಬಳಿಕ ಆರೋಗ್ಯದಲ್ಲಿ ಚೇತರಿಕೆ ಆಗಬೇಕಾಗಿದೆ.