ಮನೆ ರಾಷ್ಟ್ರೀಯ ಗುಪ್ತಚರ ಇಲಾಖೆ ಮುಖ್ಯಸ್ಥರಾಗಿ ತಪನ್‌ ಕುಮಾರ್‌ ದೇಕಾ ನೇಮಕ

ಗುಪ್ತಚರ ಇಲಾಖೆ ಮುಖ್ಯಸ್ಥರಾಗಿ ತಪನ್‌ ಕುಮಾರ್‌ ದೇಕಾ ನೇಮಕ

0

ನವದೆಹಲಿ (New Delhi): ಗುಪ್ತಚರ ಇಲಾಖೆ (ಐಬಿ) ಮುಖ್ಯಸ್ಥರನ್ನಾಗಿ ಹಿರಿಯ ಐಪಿಎಸ್‌ ಅಧಿಕಾರಿ ತಪನ್‌ ಕುಮಾರ್‌ ದೇಕಾ ಅವರನ್ನು ನೇಮಿಸಲಾಗಿದೆ.

1988 ರ ಬ್ಯಾಚ್ ಹಿಮಾಚಲ ಪ್ರದೇಶ ಕೇಡರ್ ಅಧಿಕಾರಿ ಮತ್ತು ಈಶಾನ್ಯ ವ್ಯವಹಾರಗಳ ಪರಿಣಿತರಾದ ತಪನ್ ಕುಮಾರ್ ದೇಕಾ ಪ್ರಸ್ತುತ ಗುಪ್ತಚರ ಇಲಾಖೆಯ ಕಾರ್ಯಾಚರಣೆಯ ವಿಭಾಗದ ಮುಖ್ಯಸ್ಥರಾಗಿದ್ದು, ಕಳೆದ ಎರಡು ದಶಕಗಳಿಂದ ಭಯೋತ್ಪಾದಕರು ಮತ್ತು ಧಾರ್ಮಿಕ ಮೂಲಭೂತವಾದವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಕುರಿತು ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದ್ದು, ಸಚಿವ ಸಂಪುಟದ ನೇಮಕಾತಿ ಸಮಿತಿಯು 30.06.2022 ರಂದು ಎರಡು ವರ್ಷಗಳ ಅವಧಿಗೆ ಅವರ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ, ಗುಪ್ತಚರ ಬ್ಯೂರೋದ ವಿಶೇಷ ನಿರ್ದೇಶಕರಾದ ತಪನ್ ಕುಮಾರ್ ದೇಕಾ ಅವರನ್ನು ಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶರಾಗಿ ಮತ್ತು ಉಪ ನಿರ್ದೇಶಕರಾಗಿ  ಅರವಿಂದ ಕುಮಾರ್ IPS ಅವರನ್ನು ನೇಮಕ ಮಾಡಲು ಅನುಮೋದನೆ ನೀಡಿದೆ ಎಂದು  ತಿಳಿಸಿದೆ.

ಪಂಜಾಬ್ ಕೇಡರ್‌ನ 1984 ರ ಬ್ಯಾಚ್ IPS ಅಧಿಕಾರಿ ಮತ್ತು ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ರಾ) (RAW) ಮುಖ್ಯಸ್ಥ ಸಮಂತ್‌ ಕುಮಾರ್‌ ಗೋಯೆಲ್‌ ಅವರ ಸೇವಾವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡಲಾಗಿದ್ದು, ಇದು ಅವರ ಎರಡನೇ ವಿಸ್ತರಣೆಯಾಗಿದೆ.

ಸಮಂತ್ ಕುಮಾರ್ ಗೋಯೆಲ್, IPS (PB:84) ಅವರ ಪ್ರಸ್ತುತ ಅಧಿಕಾರಾವಧಿಯನ್ನು ಮೀರಿ ಒಂದು ವರ್ಷದ ಅವಧಿಗೆ ಅಂದರೆ 30.06.2023 ರವರೆಗೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಕಾರ್ಯದರ್ಶಿಯಾಗಿ ಸೇವೆಯ ವಿಸ್ತರಣೆಯನ್ನು ಸಂಪುಟದ ನೇಮಕಾತಿ ಸಮಿತಿಯು ಅನುಮೋದಿಸಿದೆ ಎಂದು ತಿಳಿದುಬಂದಿದೆ.