ಬೆಂಗಳೂರು : ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿ ಬಂದಿದೆ. ಸೀನಿಯರ್ ವಿದ್ಯಾರ್ಥಿನಿ ಮೇಲೆ ಜ್ಯೂನಿಯರ್ ವಿದ್ಯಾರ್ಥಿ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿ ಹಾಗೂ ಸಂತ್ರಸ್ತೆ ಒಂದೇ ಕಾಲೇಜಿನವರಾಗಿದ್ದಾರೆ. ಕಳೆದ ಮೂರು ತಿಂಗಳ ಹಿಂದಷ್ಟೇ ಪರಿಚಯಳಾಗಿದ್ದ ವಿದ್ಯಾರ್ಥಿನಿ ಮೇಲೆ ಆರೋಪಿ ಅತ್ಯಾಚಾರ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಕಾಲೇಜಿನಲ್ಲೇ ಶೌಚಾಲಯಕ್ಕೆ ವಿದ್ಯಾರ್ಥಿನಿಯನ್ನು ಎಳೆದುಕೊಂಡು ಹೋಗಿ ಆರೋಪಿ ಅತ್ಯಾಚಾರವೆಸಗಿದ್ದಾನೆ.
ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಸದ್ಯ ಆರೋಪಿಯನ್ನ ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ, ಆರೋಪಿ ಬಳಿ ಕೆಲವೊಂದು ಸಾಮಗ್ರಿಗಳನ್ನು ಕಲೆಕ್ಟ್ ಮಾಡಿಕೊಳ್ಳಬೇಕಿತ್ತು. ಹೀಗಾಗಿ ಲಂಚ್ ಟೈಮ್ನಲ್ಲಿ ಭೇಟಿಯಾಗಿದ್ದಾಳೆ.
ಆರೋಪಿಯು ಸಂತ್ರಸ್ತೆಯ ಬಳಿ ಸ್ವಲ್ಪ ಮಾತನಾಡಬೇಕೆಂದು ಹೇಳಿ ಕರೆದುಕೊಂಡು ಹೋಗಿದ್ದಾನೆ. ಆಗ ಆಕೆಯನ್ನ ಕಿಸ್ ಮಾಡಲು ಒತ್ತಾಯಿಸಿದ್ದಾನಂತೆ. ತಪ್ಪಿಸಿಕೊಳ್ಳಲು ಮುಂದಾದಾಗ ವಿದ್ಯಾರ್ಥಿನಿಯನ್ನ ಬಲವಂತವಾಗಿ ವಾಶ್ ರೂಮ್ ಒಳಗೆ ಕರೆದುಕೊಂಡು ಡೋರ್ ಲಾಕ್ ಮಾಡಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.














