ಮನೆ ಮನರಂಜನೆ ಕಾಂತಾರ ಚಾಪ್ಟರ್‌-1 ಸಿನಿಮಾ – 2 ವಾರದಲ್ಲಿ 717 ಕೋಟಿ ಕಲೆಕ್ಷನ್‌

ಕಾಂತಾರ ಚಾಪ್ಟರ್‌-1 ಸಿನಿಮಾ – 2 ವಾರದಲ್ಲಿ 717 ಕೋಟಿ ಕಲೆಕ್ಷನ್‌

0

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್‌ 1 ತನ್ನ ಬ್ಲಾಕ್‌ಬಸ್ಟರ್‌ ಓಟವನ್ನು ಮುಂದುವರಿಸಿದೆ. ರಿಲೀಸ್‌ ಆಗಿ ಕೇವಲ 2 ವಾರಗಳಲ್ಲೇ ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ 717.50 ಕೋಟಿ ರೂ. ಗಳಿಸಿದೆ ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಅಧಿಕೃತವಾಗಿ ಘೋಷಿಸಿದೆ.

ಅ.2 ರಂದು ಸಿನಿಮಾ ವಿಶ್ವದಾದ್ಯಂತ ರಿಲೀಸ್‌ ಆಯಿತು. ಎಲ್ಲೆಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಮೊದಲ ವಾರದಲ್ಲಿ ವರ್ಲ್ಡ್‌ವೈಡ್‌ ದಾಖಲೆಯ 500 ಕೋಟಿ ಕ್ಲಬ್‌ ಸೇರಿತ್ತು. ಸಿನಿಮಾ ಬಿಡುಗಡೆಯಾಗಿ 2 ವಾರ ಕಳೆದರೂ ಜನರು ಥಿಯೇಟರ್‌ಗಳತ್ತ ಲಗ್ಗೆಯಿಟ್ಟಿದ್ದಾರೆ.

ಬಾಕ್ಸಾಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿರುವ ಕಾಂತಾರ ಚಾಪ್ಟರ್‌ 1 ಎರಡು ವಾರಗಳಲ್ಲಿ ವಿಶ್ವಾದ್ಯಂತ 717.50 ಕೋಟಿ + ಕ್ಲಬ್‌ ಸೇರಿದೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿ ದೀಪಾವಳಿ ಆಚರಿಸಿ ಎಂದು ಹೊಂಬಾಳೆ ಫಿಲ್ಮ್ಸ್‌ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ಮತ್ತೆ ವೀಕೆಂಡ್‌ ಬಂದಿದ್ದು, ಥಿಯೇಟರ್‌ಗಳಲ್ಲಿ ಹೆಚ್ಚಿನ ಟಿಕೆಟ್‌ ಬುಕ್‌ ಆಗುವ ಸಾಧ್ಯತೆ ಇದೆ. ದೀಪಾವಳಿ ಕೂಡ ಸಮೀಪಿಸುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಮತ್ತಷ್ಟು ಕಲೆಕ್ಷನ್‌ ಆಗಬಹುದು ಎನ್ನಲಾಗಿದೆ.