ಮನೆ ರಾಜ್ಯ ಏಳು ದಿನ ಲವ್ವರ್ ಜೊತೆ ಲಾಡ್ಜ್‌ನಲ್ಲಿದ್ದ ಪುತ್ತೂರಿನ ಯುವಕ ಸಾವು

ಏಳು ದಿನ ಲವ್ವರ್ ಜೊತೆ ಲಾಡ್ಜ್‌ನಲ್ಲಿದ್ದ ಪುತ್ತೂರಿನ ಯುವಕ ಸಾವು

0

ಬೆಂಗಳೂರು : ಏಳು ದಿನ ಲವ್ವರ್ ಜೊತೆ ಲಾಡ್ಜ್‌ನಲ್ಲಿದ್ದ ಯುವಕ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಮಾತ್ರೆ ಸೇವಿಸಿದ್ದಕ್ಕಾಗಿ ಮೃತಪಟ್ಟಿರೋ ಶಂಕೆ ವ್ಯಕ್ತವಾಗಿದೆ. ಮೃತ ಯುವಕನನ್ನು ಪುತ್ತೂರು ಮೂಲದ ತಕ್ಷಿತ್ (20) ಎಂದು ಗುರುತಿಸಲಾಗಿದ್ದು, ಮಡಿವಾಳದ ಲಾಡ್ಜ್ವೊಂದರಲ್ಲಿ ಪ್ರೇಯಿಸಿ 7 ದಿನ ಕಾಲ ಕಳೆದು, ಬಳಿಕ ಮಾರನೇ ದಿನ ಸಾವನ್ನಪ್ಪಿದ್ದಾನೆ.

ಈ ಪ್ರಕರಣ ಸಂಬಂಧಿಸಿದಂತೆ ಯುವಕನ ಮರಣೋತ್ತರ ಪರೀಕ್ಷೆಯಲ್ಲಿ ಹಲವು ವಿಚಾರಗಳು ಬಯಲಾಗಿವೆ. ಇದು ಅನುಮಾನಾಸ್ಪದ ಸಾವು ದೇಹದ ಮೇಲೆ ಯಾವುದೇ ಗಾಯಗಳಿಲ್ಲ ಎಂದು ರಿಪೋರ್ಟ್ ಪೆಂಡಿಂಗ್ ಇಟ್ಟಿದ್ದಾರೆ. ಹೀಗಾಗಿ ಪೊಲೀಸರು ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ದೇಹದ ಹಲವು ಸ್ಯಾಂಪಲ್‌ಗಳನ್ನ ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದ್ದಾರೆ.

ಲಿವರ್ ಪೀಸ್, ಜಠರ ಪೀಸ್, ಹೊಟ್ಟೆಯ ದ್ರವಣಾಂಶಗಳು, ಕಾಲರಾ ಪತ್ತೆ ಹಚ್ಚುವುದಕ್ಕೆ ವಿಸರ್ಜನಾ ತ್ಯಾಜ್ಯ, ಮಾತ್ರೆ ಸೇವನೆ ಪತ್ತೆಗೆ ರಕ್ತದ ಸ್ಯಾಂಪಲ್ ಸೇರಿ ಹಲವು ಪರೀಕ್ಷೆಗಾಗಿ ಎಫ್‌ಎಸ್‌ಲ್‌ಗೆ ರವಾನಿಸಿದ್ದಾರೆ. ಈ ಎಲ್ಲ ಪರೀಕ್ಷೆಗಳ ವರದಿ ಒಂದು ತಿಂಗಳ ಒಳಗಡೆ ಬರಲಿದೆ.

ಏನಿದು ಪ್ರಕರಣ – ಶುಕ್ರವಾರ (ಅ.18) ಯುವಕ ಸಾವನ್ನಪ್ಪಿದ್ದು, ಬೆಳಗ್ಗೆ ಲಾಡ್ಜ್ ಸಿಬ್ಬಂದಿ ರೂಂ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ಕಳೆದ ವಾರ ತನ್ನ ಪ್ರೇಯಸಿಯೊಂದಿಗೆ ಬೆಂಗಳೂರಿಗೆ ಬಂದಿದ್ದ ತಕ್ಷಿತ್ ಆನ್‌ಲೈನ್‌ನಲ್ಲಿ ಮಡಿವಾಳದಲ್ಲಿರುವ ಲಾಡ್ಜ್ವೊಂದರಲ್ಲಿ ರೂಂ ಬುಕ್ ಮಾಡಿದ್ದ. 7 ದಿನ ಲಾಡ್ಜ್‌ನಲ್ಲಿ ಪ್ರೇಯಸಿಯೊಂದಿಗೆ ಇದ್ದ. ಗುರುವಾರ ಯುವತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಕೆ ವಿರಾಜಪೇಟೆಗೆ ಹೋಗಿದ್ದಳು. ಹುಡುಗಿ ಹೋದ ಮರು ದಿನವೇ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.