ಕಾಂತಾರ ಚಾಪ್ಟರ್-1 ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಕೇವಲ ಪ್ರಾದೇಶಿಕವಾಗಿ ಅಲ್ಲದೇ ಪ್ರಪಂಚದಾದ್ಯಂತ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. ಸಿನಿಮಾ ನೋಡಿ ತಮ್ಮ ಅಭಿಪ್ರಾಯಗಳನ್ನು ಅಭಿಮಾನಿ ವರ್ಗ ಹಂಚಿಕೊಂಡಿದೆ. ಬಹುಭಾಷೆಯಲ್ಲಿ ಏಕಕಾಲಕ್ಕೆ ತೆರೆಕಂಡ ಕಾಂತಾರ ಚಾಪ್ಟರ್-1 ಸಿನಿಮಾಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ.
3ನೇ ವಾರದಲ್ಲೂ ಕಾಂತಾರ ಸಿನಿಮಾದ ಗಳಿಕೆ ಕುಗ್ಗಿಲ್ಲ. ಸಾಲು ಸಾಲು ರಜಾ ದಿನಗಳ ಜೊತೆ ಹಬ್ಬ ಇರುವ ಕಾರಣ ಚಿತ್ರ ನೋಡಲು ಥಿಯೇಟರ್ಗೆ ಜನ ಬರುತ್ತಿದ್ದಾರೆ. 800 ಕೋಟಿ ರೂ. ಸನಿಹದಲ್ಲಿರುವ ಕಾಂತಾರ 18 ದಿನಗಳಲ್ಲಿ ವಿಶ್ವದಾದ್ಯಂತ 765 ಕೋಟಿ ರೂ. ಗಳಿಕೆ ಮಾಡಿದೆ.
ಕಾಂತಾರ ಚಾಪ್ಟರ್-1 ಸಿನಿಮಾಗೆ ಪೇಕ್ಷಕರು ನೀಡಿದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡ ತೀರ್ಥಯಾತ್ರೆ ಕೈಗೊಂಡಿದೆ. ರಿಷಬ್ ಶೆಟ್ಟಿ ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೂ ಎಲ್ಲಾ ದೇವಾಲಯಗಳಿಗೆ ಭೇಟಿ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ. ಯಶಸ್ಸಿಗೆ ಕಾರಣವಾದ ದೇವರ ಹರಕೆ ತೀರಿಸುತ್ತಿದ್ದಾರೆ. ಜೊತೆಗೆ ಜನರಿಗೆ ಈ ಮೂಲಕ ಧನ್ಯವಾದಗಳನ್ನು ಚಿತ್ರತಂಡ ತಿಳಿಸಿದೆ.














