ನೆಲಮಂಗಲ : ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡನಹಳ್ಳಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ದಿನ ಮನೆಗೆ ನುಗ್ಗಿ ಪುರುಷನನ್ನ ಕಟ್ಟಿ ಹಲ್ಲೆ ಮಾಡಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ನಾಪತ್ತೆಯಾಗಿದ್ದ, ಈ ಪ್ರಕರಣ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗ್ಯಾಂಗ್ ರೇಪ್ ಮಾಡಿ ಪ್ರಕರಣ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ಮಿಥುನ್ ಎ1 ಆರೋಪಿ. ನೆಲಮಂಗಲ ತಾಲೂಕಿನ ಶಿವಗಂಗೆ ಬಳಿ ತಲೆಮರೆಸಿಕೊಂಡಿದ್ದ. ಘಟನೆ ಸಂಬಂಧ ಆರೋಪಿಯನ್ನ ನೆಲಮಂಗಲ ಡಿವೈಎಸ್ಪಿ ಜಗದೀಶ್ ನೇತೃತ್ವದ ತಂಡ ಬಂಧಿಸಿದೆ.
ಈ ಪ್ರಕರಣದ ಎಲ್ಲಾ ಆರು ಜನ ಆರೋಪಿಗಳ ಬಂಧನವಾಗಿದ್ದು, ಆರರಲ್ಲಿ ಇಬ್ಬರು ಅಪ್ರಾಪ್ತ ಬಾಲಕರು. ಅವರನ್ನು ಬಾಲಪರಧಿ ಕಾರಾಗೃಹಕ್ಕೆ ಬಿಡಲಾಗಿದೆ. ಉಳಿದಂತೆ ಮಿಥುನ್, ಕಾರ್ತಿಕ್, ನವೀನ್, ಗ್ಲಾನಿ ಬಂಧನವಾಗಿದೆ. ಈ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ಬಂಧನ ಮಾಡಿರುವ ಪೊಲೀಸರು ವಿಚಾರಣೆ ನಡೆಸಿ ಡಿಎನ್ಎ ಟೆಸ್ಟ್ಗೆ ಒಳಪಡಿಸಲಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.















