ಮನೆ ರಾಜ್ಯ ಜುಲೈ 1 ರಿಂದ ಹೊಸ ಕಾರ್ಮಿಕ ಕಾಯ್ದೆ ಜಾರಿಗೆ

ಜುಲೈ 1 ರಿಂದ ಹೊಸ ಕಾರ್ಮಿಕ ಕಾಯ್ದೆ ಜಾರಿಗೆ

0

ಬೆಂಗಳೂರು (Bengaluru): ದೇಶದಲ್ಲಿ ಜುಲೈ 1 ರಿಂದ ಹೊಸ ಕಾರ್ಮಿಕ ಕಾಯ್ದೆ ಜಾರಿಗೆ ಬರಲಿದೆ. ಈಗಾಗಲೇ 4 ನೂತನ ಕಾರ್ಮಿಕ ಸಂಹಿತೆಗಳು ಅನುಮೋದನೆಗೊಂ೦ಡಿದ್ದು ಜುಲೈ 1ರ೦ದು ಜಾರಿಗೆ ಬರಲಿದೆ.  

ಈ ಹೊಸ ಕಾನೂನು ಪ್ರಕಾರ, ಕಾರ್ಮಿಕರು ಪಡೆಯುವ ವೇತನ, ಭವಿಷ್ಯ ನಿಧಿಗಾಗಿ ಕಡಿತವಾಗುವ ಹಣ ಹಾಗೂ ಕರ್ತವ್ಯದ ಅವಧಿಯಲ್ಲಿ ಭಾರೀ ಬದಲಾವಣೆ ಆಗಲಿದೆ.

ನೂತನ ಪ್ರಸ್ತಾಪಿತ ವೇತನ ಸಂಹಿತೆಯಲ್ಲಿ ನೌಕರರ ಟೇಕ್‌ ಹೋಂ ಸ್ಯಾಲರಿಯಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಜೊತೆಗೆ ಪ್ರತಿದಿನದ ಕೆಲಸದ ಅವಧಿಯಲ್ಲಿ ಹೆಚ್ಚಳ, ಭವಿಷ್ಯ ನಿಧಿಗೆ ಜಮೆ ಆಗುವ ಮೊತ್ತದಲ್ಲಿ ಏರಿಕೆಯಾಗಲಿದೆ.

ಹೊಸ ಕಾರ್ಮಿಕ ಕಾಯ್ದೆ ಹೀಗಿದೆ.

* ವೇತನ ಸಂಹಿತೆ

* ಸಾಮಾಜಿಕ ಭದ್ರತಾ ಸಂಹಿತೆ

* ಕೆಲಸದ ಸ್ಟಳದಲ್ಲಿ ಸುರಕ್ಷತೆ, ಆರೋಗ್ಯ ಮತ್ತು ಸ್ಥಿತಿಗತಿ ಸಂಹಿತೆ

* ಕೈಗಾರಿಕಾ ಸ೦ಬ೦ಧಗಳ ಸಂಹಿತೆ

ಆಯಾ ರಾಜ್ಯ ಸರ್ಕಾರಗಳು ಕೂಡ ಪೂರಕ ನಿಯಮಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಬೇಕಿದೆ. ವೇತನ ಸಂಹಿತೆಯ ಅಡಿ 23 ರಾಜ್ಯಗಳು ಮತ್ತು ಕೇ೦ದ್ರಾಡಳಿತ ಪ್ರದೇಶಗಳು ಕರಡು ನಿಯಮಗಳನ್ನು ಘೋಷಿಸಿವೆ. ಅದರಂತೆ, ಹೊಸ ನಿಯಮಗಳ ಪ್ರಕಾರ, ಕಾರ್ಮಿಕರ ಕೆಲಸದ ಅವಧಿಯನ್ನು 89 ಗ೦ಟೆಗಳಿ೦ದ 12 ಗ೦ಟೆಗಳಿಗೆ ವಿಸ್ತರಿಸಲು ಅವಕಾಶವಿದೆ.

ಹಾಗೆಯೇ, ಒ೦ದು ದಿನಕ್ಕೆ 32 ಗ೦ಟೆ ಕೆಲಸ ಮಾಡುವ ಸಿಬ್ಬ೦ದಿ ವಾರದಲ್ಲಿ ಮೂರು ದಿನ ರಜೆ ಪಡೆಯಲು ಹಕ್ಕುಳ್ಳವರಾಗಿದ್ದಾರೆ. ಕಾರ್ಮಿಕರ ವಾರದ ಒಟ್ಟು ಕೆಲಸದ ಅವಧಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವಾರದಲ್ಲಿ ಕೆಲಸ ಮಾಡುವ ದಿನಗಳ ಸಂಖ್ಯೆ ನಾಲ್ಕಕ್ಕೆ ಇಳಿಕೆಯಾಗಲಿದೆ.

ವೇತನ ನೀತಿ ಪ್ರಕಾರ, ವಾರದ ಒಟ್ಟು ಕೆಲಸದ ಅವಧಿ 48 ಗ೦ಟೆಗಳು. ಹೊಸ ನೀತಿ ಪ್ರಕಾರ, ನೌಕರರ ಒಟ್ಟು ತಿಂಗಳ ಸ೦ಬಳದಲ್ಲಿ ಮೂಲ ವೇತನದ (550 ಪ್ರಮಾಣವು ಕನಿಷ್ಠ ಶೇ.50ರಷ್ಟು ಇರಬೇಕು. ಆದರೆ, ನೌಕರರ ವೇತನದಲ್ಲಿ ಭತ್ಯೆಗಳ ಪ್ರಮಾಣವು ಶೇ.50ನ್ನು ಮೀರುವಂತಿಲ್ಲ. ಆದ್ದರಿಂದ, ವೇತನದಲ್ಲಿ 99 ಕಡಿತದಿ೦ದ ಉಳಿತಾಯದ ಪ್ರಮಾಣವು ಹೆಚ್ಚಲಿದೆ. ಸಹಜವಾಗಿಯೇ, ಕಾರ್ಮಿಕರು ನಿವೃತ್ತಿ ವೇಳೆ ಪಡೆಯುವ ಮೊತ್ತ ಹಾಗೂ ಗ್ಯಾಚ್ಯುಟಿ ಮೊತ್ತದಲ್ಲಿ ಹೆಚ್ಚಳವಾಗಲಿದೆ. ಆದರೆ, ಈಗಿನಂತೆ ನೌಕರರ ಕೈಗೆ ಸಿಗುವ ಸ೦ಬಳದಲ್ಲಿ ಕಡಿತವಾಗಲಿದೆ.

ಕೈಗಾರಿಕಾ ಕಾಯ್ದೆ 1945 ಪ್ರಕಾರ, ಕೈಗಾರಿಕೆಗಳು ಹಾಗೂ ಅ೦ತಹ ಸ್ಥಳಗಳಲ್ಲಿ ಕೆಲಸದ ಸಮಯವನ್ನು ಫಿಕ್ಸ್‌ ಮಾಡಲಾಗಿದೆ. ಉಳಿದಂತೆ, ಕಚೇರಿಯಲ್ಲಿ ದುಡಿಯುವ ನೌಕರರು ಹಾಗೂ ಇತರೆ ಉದ್ಯೋಗಿಗಳ ಕರ್ತವ್ಯದ ಸಮಯವನ್ನು ‘ಅಂಗಡಿ ಮತ್ತು ಸಂಸ್ಥೆಗಳಿಗೆ ಸ೦ಬ೦ಧಿಸಿದ ಕಾಯ್ದೆ’ ಅಡಿಯಲ್ಲಿ ಆಯಾ ರಾಜ್ಯ ಸರ್ಕಾರಗಳೇ ನಿಯಮ ರೂಪಿಸಲಿವೆ.