ಮನೆ ರಾಷ್ಟ್ರೀಯ ಮಹಾ ರಾಜಕೀಯ ಬಿಕ್ಕಟ್ಟು:  ಶಾಸಕರನ್ನು ಅನರ್ಹಗೊಳಿಸುವ ಕ್ರಮವನ್ನು ಸುಪ್ರೀಂ ಕೋರ್ಟ್‌ ನಲ್ಲಿ ಪ್ರಶ್ನಿಸಿದ ಏಕನಾಥ್‌ ಶಿಂಧೆ

ಮಹಾ ರಾಜಕೀಯ ಬಿಕ್ಕಟ್ಟು:  ಶಾಸಕರನ್ನು ಅನರ್ಹಗೊಳಿಸುವ ಕ್ರಮವನ್ನು ಸುಪ್ರೀಂ ಕೋರ್ಟ್‌ ನಲ್ಲಿ ಪ್ರಶ್ನಿಸಿದ ಏಕನಾಥ್‌ ಶಿಂಧೆ

0

ನವದೆಹಲಿ (New Delhi): ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಇದೀಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಬಂಡಾಯ ನಾಯಕ ಏಕನಾಥ್ ಶಿಂಧೆ ಶಾಸಕರನ್ನು ಅನರ್ಹಗೊಳಿಸುವ ಶಿವಸೇನೆಯ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ತಮ್ಮನ್ನು ಪದಚ್ಯುತಗೊಳಿಸುವ ವಿಷಯ ನಿರ್ಧಾರವಾಗುವವರೆಗೆ ಅನರ್ಹತೆ ಅರ್ಜಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಂತೆ ಉಪ ಸ್ಪೀಕರ್‌ಗೆ ಆದೇಶ ನೀಡುವಂತೆ ಬಂಡುಕೋರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅಲ್ಲದೆ ತಮ್ಮ ಕುಟುಂಬಗಳಿಗೆ ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆಯೂ ಅವರು ನ್ಯಾಯಾಲಯವನ್ನು ಕೋರಿದ್ದಾರೆ. ಇಂದು ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಉಪಸಭಾಪತಿ ನರಹರಿ ಜಿರ್ವಾಲ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿ ಅಜಯ್ ಚೌಧರಿ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿರುವುದನ್ನು ಏಕನಾಥ್ ಶಿಂಧೆ ತಂಡವು ಪ್ರಶ್ನಿಸಿದೆ.

ಈ ವಾರದ ಆರಂಭದಲ್ಲಿ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನೆ ಉಪ ಸ್ಪೀಕರ್‌ಗೆ ಮನವಿ ಸಲ್ಲಿಸಿದೆ. ಶಿಂಧೆ ಪಾಳಯವು ಈ ಕ್ರಮವನ್ನು ಕಾನೂನುಬಾಹಿರ ಎಂದು ಪ್ರತಿಪಾದಿಸಿದೆ. ಏಕೆಂದರೆ ಅನರ್ಹತೆಯು ಅಸ್ತ್ರ ವಿಧಾನಸಭೆಯಲ್ಲಿನ ವಿಷಯಗಳಿಗೆ ಮಾತ್ರ ಸಂಬಂಧಿಸಿದ್ದು , ಪಕ್ಷದ ಸಭೆಗಲ್ಲ ಎಂದಿದೆ.

ಶಿಂಧೆ ಅವರೊಂದಿಗೆ ಬೀಡುಬಿಟ್ಟಿರುವ ಶಾಸಕರಲ್ಲಿ ಕನಿಷ್ಠ 20 ಶಾಸಕರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ. ಅವರಲ್ಲಿ ಕೆಲವರು ಬಿಜೆಪಿ ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.