ಮನೆ ರಾಜ್ಯ ಮುಸ್ಲಿಂ ಮದುವೆ ಮನೆಯಲ್ಲಿ ಊಟಕ್ಕೆ ಕುಳಿತಿದ್ದ, ಹಿಂದೂ ವ್ಯಕ್ತಿಯನ್ನು ಏಳಿಸಿ ಅಪಮಾನ

ಮುಸ್ಲಿಂ ಮದುವೆ ಮನೆಯಲ್ಲಿ ಊಟಕ್ಕೆ ಕುಳಿತಿದ್ದ, ಹಿಂದೂ ವ್ಯಕ್ತಿಯನ್ನು ಏಳಿಸಿ ಅಪಮಾನ

0

ನೆಲಮಂಗಲ : ಮುಸ್ಲಿಂ ಮದುವೆ ಮನೆಯಲ್ಲಿ ತಿಲಕ ಇಟ್ಕೊಂಡು ಊಟಕ್ಕೆ ಕುಳಿತಿದ್ದ ಹಿಂದೂ ವ್ಯಕ್ತಿಯನ್ನು ಅರ್ಧದಲ್ಲೇ ಎಬ್ಬಿಸಿ ಅಪಮಾನ ಮಾಡಿರುವ ಘಟನೆ ಇಂದು ನೆಲಮಂಗಲದಲ್ಲಿ ನಡೆದಿದೆ. ಆಹ್ವಾನದ ಮೇರೆಗೆ ಮದುವೆಗೆ ಬಂದ ವ್ಯಕ್ತಿ ಹಿಂದೂ ಎಂಬ ಕಾರಣಕ್ಕೆ ಊಟಕ್ಕೆ ಕುಳಿತಿದ್ದವರನ್ನು ಮೇಲಕ್ಕೆ ಏಳಿಸಿ ಅಪಮಾನ ಮಾಡಲಾಗಿದೆ.

ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ನೆಲಮಂಗಲದ ಸಮಿವುಲ್ಲಾ ಕುಟುಂಬದ ಮದುವೆ ಇದೆ ತಿಂಗಳ 26 ರಂದು ಖಾಸಗಿ ಮಂಟಪದಲ್ಲಿ ಮುಜಾಮಿಲ್ ಪಾಷ ಹಾಗೂ ಸಾನಿಯಾ ಎಂಬವರ ಮದುವೆ ನಡೆದಿದೆ.

ಈ ವೇಳೆ ಸಾನಿಯಾ ಕುಟುಂಬದ ಸ್ನೇಹಿತನಾದ ರಾಜು ಎಂಬವರು ಮದುವೆಗೆ ಹೋಗಿದ್ದರು. ಊಟಕ್ಕೆ ಕುಳಿತಿದ್ದ ವೇಳೆ ಸಮಿವುಲ್ಲಾ ಏಕಾಏಕಿ ಬಂದು, ‘ಆಹ್ವಾನ ನೀಡದೆ ಮದುವೆಗೆ ಏಕೆ ಬಂದೆ, ನಿನಗೆ ಊಟ ಹಾಕಲ್ಲ. ಮೇಲೆ ಏಳು ಎಂದು ಗಲಾಟೆ ಮಾಡಿದ್ದಾರೆ.

ಈ ಗಲಾಟೆಯನ್ನು ಮದುವೆಗೆ ಹೋಗಿದ್ದ, ಮತ್ತೊಬ್ಬ ವ್ಯಕ್ತಿ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ‌ ಎಂದು ಹೇಳಲಾಗಿದೆ.