ಮನೆ ಅಪರಾಧ ಚಿನ್ನ ಮಾರಾಟ ಮಾಡಿ, ಹಣ ಕೊಡೋದಾಗಿ ವಂಚನೆ – 1,300 ಗ್ರಾಂ ಲಪಟಾಯಿಸಿದ್ದ ಇಬ್ಬರು ಬಂಧನ

ಚಿನ್ನ ಮಾರಾಟ ಮಾಡಿ, ಹಣ ಕೊಡೋದಾಗಿ ವಂಚನೆ – 1,300 ಗ್ರಾಂ ಲಪಟಾಯಿಸಿದ್ದ ಇಬ್ಬರು ಬಂಧನ

0

ಬೆಂಗಳೂರು : ಚಿನ್ನ ಮಾರಾಟ ಮಾಡಿ, ಹಣ ಕೊಡೋದಾಗಿ ಹೇಳಿ 1.6 ಕೋಟಿ ರೂ. ಮೌಲ್ಯದ 1,300 ಗ್ರಾಂ ಚಿನ್ನವನ್ನು ಲಪಟಾಯಿಸಿದ್ದ ಇಬ್ಬರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜೀರನ್ ಸಕಾರಿಯಾ, ರಾಜೇಂದ್ರ ಸಕಾರಿಯಾ ಎಂದು ಗುರುತಿಸಲಾಗಿದೆ.

ಕಳೆದ ಕೆಲವು ತಿಂಗಳ ಹಿಂದೆ ಹರ್ಷಿತ್.ಬಿ ಎಂಬುವವರಿಗೆ ಆರೋಪಿಗಳು ಪರಿಚಯವಾಗಿದ್ದರು. ಅದಾದ ಬಳಿಕ ಮಹಿಳೆಯಿಂದ 1.60 ಕೋಟಿ ಮೌಲ್ಯದ 1300 ಗ್ರಾಂ ಚಿನ್ನದ ಗಟ್ಟಿಯನ್ನು ಪಡೆದು ಮಾರಾಟ ಮಾಡಿಕೊಡುವುದಾಗಿ ಹೇಳಿದ್ದರು.

ಚಿನ್ನ ಪಡೆದು ಮೂರು ತಿಂಗಳಾದರೂ ಕೂಡ ಹಣ ನೀಡಿರಲಿಲ್ಲ. ಇದರಿಂದ ಮಹಿಳೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ ಇಬ್ಬರು ಆರೋಪಗಳನ್ನು ಅರೆಸ್ಟ್‌ ಮಾಡಿ, ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಹಲವರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.