ನವದೆಹಲಿ : ದೆಹಲಿಯಲ್ಲಿ ನಿಗೂಢ ಸ್ಫೋಟ ಸಂಭವಿಸಿ 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ ಬಂಧಿಸಲಾಗಿದ್ದ ಯುಪಿಯ ವೈದ್ಯೆಗೆ ಉಗ್ರ ಮಸೂದ್ ಅಜರ್ ಸಹೋದರಿ ಜತೆ ನಂಟಿತ್ತು ಎಂಬುದು ತಿಳಿದುಬಂದಿದೆ.
ಇವೆರಲ್ಲರೂ ಸೇರಿ ಮಹಿಳಾ ಉಗ್ರ ಪಡೆಗಳನ್ನು ಕಟ್ಟಲು ಸಂಚು ರೂಪಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಲಕ್ನೋ ಮೂಲದ ಡಾಕ್ಟರ್ ಶಾಹೀನ್ ಶಾಹಿಸ್, ಕಾರಿನಲ್ಲಿ ಎಕೆ-47 ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಆಕೆಯ ವಿಚಾರಣೆ ವೇಳೆ, ಮೋಸ್ಟ್ ವಾಂಟೆಡ್ ಉಗ್ರ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸಹೋದರಿ ಸಾದಿಯಾ ಅಜರ್ ಜೊತೆ ನಂಟು ಇರುವುದು ಬಯಲಾಗಿದೆ.
ಸಾದಿಯಾ ಅಜರ್ ಜಮಾತ್ ಉಲ್ ಮುನಾಯತ್ ಎಂಬ ಜೈಶ್ ಉಗ್ರರ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದು, ಭಾರತದಲ್ಲಿ ಮಹಿಳಾ ಭಯೋತ್ಪಾದಕರ ಸಂಘಟನೆಯನ್ನು ಕಟ್ಟುವ ಹೊಣೆಯನ್ನು ಶಾಹಿನ್ಗೆಗೆ ವಹಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಮಸೂದ್ ಅಜರ್ ಕುಟುಂಬದ ಹತ್ತು ಮಂದಿ ಮೃತಪಟ್ಟಿದ್ದರು, ಅದರಲ್ಲಿ ಸಾದಿಯಾ ಅಜರ್ನ ಪತಿ ಯೂಸೆಫ್ ಅಜರ್ ಕೂಡ ಸೇರಿದ್ದ. ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಕಳೆದ ಮೇ ತಿಂಗಳಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಬಹವಲ್ಪುರದಲ್ಲಿರುವ ಮಸೂದ್ ಅಜರ್ನ ನೆಲೆಗಳ ಮೇಲೆ ದಾಳಿ ನಡೆಸಿತ್ತು ಎನ್ನಲಾಗಿದೆ.















