ಹಾವೇರಿ : ಸರ್ಕಾರ ಘೋಷಣೆ ಮಾಡಿದ ಕಬ್ಬಿನ ಬೆಲೆಯನ್ನು ನೀಡಬೇಕು ಎಂದು ಆಗ್ರಹಿಸಿ ಹಾವೇರಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಮುಂದುವರೆದಿದೆ. ಹಾವೇರಿಯ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಹಾಗೂ ಕಾರ್ಖಾನೆಯ ಮಾಲೀಕರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ 3,300 ರುಪಾಯಿ ಘೋಷಣೆ ಮಾಡಿದೆ. ಅದರೆ ಮೂರು ಕಾರ್ಖಾನೆಗಳು 2,700 ರೂ. ಮತ್ತು 2,800 ರೂ. ಕೊಡಲು ಮುಂದೆ ಬರುತ್ತಿದ್ದಾರೆ. ಸರ್ಕಾರ ಘೋಷಣೆ ಮಾಡಿದ ಕಬ್ಬಿನ ದರ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಸರ್ಕಾರ ಘೋಷಣೆ ಮಾಡಿದ ದರ ಕೊಡದಿದ್ದರೆ, ಕಾರ್ಖಾನೆಗೆ ಬೀಗ ಹಾಕುವ ಎಚ್ಚರಿಕೆ ನೀಡಿದ್ದಾರೆ.
ಸಂಗೂರು ಸಕ್ಕರೆ ಸಹಕಾರಿ ಸಂಘಕ್ಕೆ ವಾಪಸು ತೆಗೆದುಕೊಂಡರೆ ರೈತರಿಗೆ ಸೂಕ್ತವಾದ ಬೆಲೆ ಕೊಡಬೇಕು. ಕಾರ್ಖಾನೆ ಮಾಲೀಕರು ಹುಲಿ ಹಾಲು ಕುಡಿದಿಲ್ಲ. ಅವರಿಗೆ ಖಡಕ್ ಸೂಚನೆ ನೀಡಬೇಕು. ನಾವು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ. ಇಲ್ಲದಿದ್ದರೆ ನಾವು ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.















