ಕೊಪ್ಪಳ : ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣದಡಿಯಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಜೇಂದ್ರಗಡ ಮೂಲದ ಲಕ್ಷ್ಮಣ, ಬಸವರಾಜ್, ಯಲಬುರ್ಗಾ ತಾಲೂಕಿನ ಮುತ್ತುರಾಜ್ ಹಾಗೂ ಶಶಿಕುಮಾರ್‌ನನ್ನು ಯಲಬುರ್ಗಾ ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಮದ್ಲೂರ ಸಮೀಪ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಪಾಳು ಬಿದ್ದ ಮನೆಯಲ್ಲಿ ಮದ್ಯ ಸೇವಿಸಿ ಆರೋಪಿಗಳು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದರು. ಸಂತ್ರಸ್ತೆ ನೀಡಿದ ದೂರಿನನ್ವಯ ನಾಲ್ವರ ವಿರುದ್ಧ ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಸಂತ್ರಸ್ತೆಗೆ ಪರಿಚಯವಿದ್ದ ಲಕ್ಷ್ಮಣ ಆಕೆಗೆ 5,000 ಹಣ ಕೊಡಬೇಕಾಗಿತ್ತು. ಹಣ ಕೊಡುತ್ತೇನೆಂದು ಮಹಿಳೆಯನ್ನು ಕುಷ್ಟಗಿಗೆ ಕರೆಸಿಕೊಂಡಿದ್ದ ಆರೋಪಿ ಸಂತ್ರಸ್ತೆಯನ್ನು ಅಲ್ಲಿಂದ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಅಲ್ಲಿಂದ ಇನ್ನು ಮೂರು ಜನ ಸೇರಿ ಜೂಸ್ ಅಂತಾ ಏನೋ ಕುಡಿಸಿ ಅತ್ಯಾಚಾರವೆಸಗಿದ್ದರು. ಈ ಘಟನೆ ಸಂಬಂಧ ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಎನ್‌ಎಸ್ 115(2), 70, 351(2) ಸಹಿತ 3(5) ಭಾರತೀಯ ನ್ಯಾಯ ಸಂಹಿತೆ 2023 ಅಡಿಯಲ್ಲಿ ಕೇಸ್ ದಾಖಲಾಗಿತ್ತು.















