ಮನೆ ಸುದ್ದಿ ಜಾಲ ಎಲ್ಲೆಂದರಲ್ಲಿ ಕಸ ಸುಟ್ಟರೆ ಒಂದು ಲಕ್ಷ ದಂಡ, ಐದು ವರ್ಷ ಜೈಲು ಶಿಕ್ಷೆ..!

ಎಲ್ಲೆಂದರಲ್ಲಿ ಕಸ ಸುಟ್ಟರೆ ಒಂದು ಲಕ್ಷ ದಂಡ, ಐದು ವರ್ಷ ಜೈಲು ಶಿಕ್ಷೆ..!

0

ಬೆಂಗಳೂರು : ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುಟ್ಟರೆ ಒಂದು ಲಕ್ಷ ರೂ. ದಂಡ ಹಾಗೂ ಐದು ವರ್ಷ ಜೈಲು ಶಿಕ್ಷೆ ವಿಧಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಹೊಸ ನಿಯಮ ಜಾರಿ ತಂದಿದೆ.

ಈ ಮೊದಲು ಎಲ್ಲೆಂದರಲ್ಲಿ ಕಸ ಎಸೆದವರ ಮನೆ ಮುಂದೆಯೇ ಕಸ ಸುರಿದು ದಂಡ ವಿಧಿಸಿದ್ದರು. ಇದೀಗ ಪ್ರಕಾರ ಕಸ ಸುಟ್ಟರೆ ವಾಯುಮಾಲಿನ್ಯ ಆಗಲಿದೆ ಎಂದು ಎಂದು ಹೊಸ ನಿಯಮ ಜಾರಿ ಮಾಡಿದ್ದು, ಪರಿಸರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಒಂದು ಲಕ್ಷ ರೂ.ವರೆಗೂ ದಂಡ ಹಾಗೂ ಐದು ವರ್ಷ ಜೈಲು ಶಿಕ್ಷೆ ವಿಧಿಸಲು ನಿರ್ಧರಿಸಿದೆ.

ಈ ಸಂಬಂಧ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಸಾರ್ವಜನಿಕರಿಗೆ ಕರೆ ನೀಡಿದ್ದು, ಕಸ ಸುಡುತ್ತಿರುವ ವಿಡಿಯೋ ಹಂಚಿಕೊಳ್ಳಲು ನಿರ್ಧರಿಸಿದೆ. ಕಸವನ್ನ ಸಂಸ್ಕರಣ ಘಟಕಕ್ಕೆ ಕಳುಹಿ, ವಿದ್ಯುತ್ ಉತ್ಪಾದಿಸಲಾಗುತ್ತದೆ. ಹೀಗಾಗಿ ಕಸ ಸುಡದಂತೆ ಎಚ್ಚರವಹಿಸಿ ನಿಯಮ ಉಲ್ಲಂಘಿಸಿದ್ರೆ, ದಂಡ ವಿಧಿಸಲಾಗುವುದು ಎಂದು ಘನತ್ಯಾಜ್ಯ ನಿರ್ವಹಣಾ ಇಲಾಖೆ ತಿಳಿಸಿದೆ.