ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಿದೆ. ನಾಗವಾರ ಮೆಟ್ರೋ ನಿಲ್ದಾಣವನ್ನು ಹೈಟೆಕ್ ಮಾಡಲು ಬಿಎಂಆರ್‌ಸಿಎಲ್ ಪ್ಲಾನ್ ಮಾಡಿದ್ದು, ಇದಕ್ಕಾಗಿ ಟೆಂಡರ್ ಕರೆದಿದೆ.
ನಾಗವಾರ ಸ್ಟೇಷನ್‌ನಲ್ಲಿ ಶಾಪಿಂಗ್ ಮಾಲ್, ಬಹುಮಹಡಿ ಪಾರ್ಕಿಂಗ್ ಸೌಲಭ್ಯ ಜೊತೆಗೆ ಕಾರ್ಪೋರೇಟ್ ಕಚೇರಿ ತೆರೆಯಲು ಉದ್ದೇಶಿಸಿದ್ದು, ನಿಲ್ದಾಣವನ್ನು ನಾಲ್ಕು ಮಹಡಿಯಲ್ಲಿ ಕಟ್ಟಲು ಯೋಜನೆ ರೂಪಿಸಲಾಗಿದೆ.
ನಾಗವಾರ ಮೆಟ್ರೋ ನಿಲ್ದಾಣವು ಮಾನ್ಯತಾ ಟೆಕ್ ಪಾರ್ಕ್, ಕಾರ್ಲೆ ಟೌನ್ ಸೆಂಟರ್ ಮತ್ತು ದೊಡ್ಡ ವಸತಿ ಪ್ರದೇಶಗಳಿಗೆ ವಾಣಿಜ್ಯ ಅವಕಾಶವನ್ನು ನೀಡುವ ಉದ್ದೇಶದಿಂದ ಈ ಯೋಜನೆ ಮಾಡಲಾಗಿದೆ. ಡಿಸೆಂಬರ್ 2026ರ ವೇಳೆಗೆ ಮೆಟ್ರೋ ನಿಲ್ದಾಣವು ಕಾರ್ಯಾರಂಭ ಮಾಡಲು ನಿರ್ಧರಿಸಲಾಗಿದೆ.














