ಮನೆ ರಾಜ್ಯ ಸರಳು ಬಡಿದು ಡೀಸೆಲ್‌ ಟ್ಯಾಂಕ್‌ ಲೀಕ್‌ – 2 ಗಂಟೆ ಕೆಟ್ಟುನಿಂತ ಎಕ್ಸ್‌ಪ್ರೆಸ್‌ ರೈಲು

ಸರಳು ಬಡಿದು ಡೀಸೆಲ್‌ ಟ್ಯಾಂಕ್‌ ಲೀಕ್‌ – 2 ಗಂಟೆ ಕೆಟ್ಟುನಿಂತ ಎಕ್ಸ್‌ಪ್ರೆಸ್‌ ರೈಲು

0

ರಾಮನಗರ : ಡೀಸೆಲ್‌ ಟ್ಯಾಂಕ್‌ಗೆ ಕಬ್ಬಿಣದ ಸರಳು ಬಡಿದ ಪರಿಣಾಮ ಡೀಸೆಲ್‌ ಸೋರಿಕೆಯಾಗಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ, ಹಂಪಿ ಎಕ್ಸ್‌ಪ್ರೆಸ್‌ ರೈಲು 2 ಗಂಟೆಗಳ ಕಾಲ ಕೆಟ್ಟು ನಿಂತ ಘಟನೆ ಚನ್ನಪಟ್ಟಣ ಸಮೀಪ ನಡೆದಿದೆ.

ಚನ್ನಪಟ್ಟಣ ಸಮೀಪದ ವಂದಾರಗುಪ್ಪೆ ಬಳಿ ಘಟನೆ ನಡೆದಿದ್ದು, ರೈಲು ಕೆಟ್ಟು ನಿಂತಿದ್ದನ್ನು ಸಿಬ್ಬಂದಿ ಪರಿಶೀಲಿಸಿದಾಗ ಡೀಸೆಲ್ ಟ್ಯಾಂಕ್‌ಗೆ ಕಬ್ಬಿಣ ಸರಳು ಬಡಿದು ಸೋರಿಕೆಯಾಗುತ್ತಿದ್ದದ್ದು ಕಂಡುಬಂದಿದೆ. ಕೊನೆಗೆ ಸ್ಥಳದಲ್ಲಿದ್ದ ರೈಲ್ವೆ ಸಿಬ್ಬಂದಿ ಪರಿಶೀಲಿಸಿದ, ಬಳಿಕ ಮತ್ತೊಂದು ಎಂಜಿನ್‌ ಸಹಾಯದಿಂದ ಬೆಂಗಳೂರು ಕಡೆಗೆ ರೈಲನ್ನು ಚಾಲನೆ ಮಾಡಲಾಯಿತು.

ಡೀಸೆಲ್‌ ಟ್ಯಾಂಕ್‌ ಸೋರಿಕೆಯಾದ ಪರಿಣಾಮ 2 ಗಂಟೆಗಳ ಕಾಲ ರೈಲು ನಿಂತಲ್ಲೇ ನಿಂತ್ತಿತ್ತು. ಈ ಘಟನೆ ಬಳಿಕ ಉದ್ದೇಶ ಪೂರ್ವಕವಾಗಿ ಟ್ರ್ಯಾಕ್‌ನಲ್ಲಿ ಕಬ್ಬಿಣದ ಸರಳು ಇಟ್ಟಿರುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂಧು ತಿಳಿದುಬಂದಿದೆ.