ಬೆಂಗಳೂರು : ಶಾಸಕರು ದೆಹಲಿಗೆ ಹೋಗಿ ಅವರ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಡಿಸಿಎಂ ಡಿಕೆಶಿ ಮತ್ತೊಂದು ಬಣ ದೆಹಲಿಗೆ ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕರು ದೆಹಲಿಗೆ ಹೋಗುವುದಕ್ಕೆ ಸ್ವತಂತ್ರರಿದ್ದಾರೆ. ಶಾಸಕರು ಹೈಕಮಾಂಡ್‌ಗೆ ಅಭಿಪ್ರಾಯ ಏನು ಕೊಡುತ್ತಾರೆ ನೋಡೋಣ.
ಆದರೆ ಅಂತಿಮವಾಗಿ ಹೈಕಮಾಂಡ್ ನಾಯಕರು ನಿರ್ಣಯ ತೆಗೆದುಕೊಳ್ಳುತ್ತಾರೆ. ಎಲ್ಲಾ ಗೊಂದಲಗಳಿಗೆ ಹೈಕಮಾಂಡ್ ಫುಲ್ ಸ್ಟಾಪ್ ಇಡಬೇಕಿದೆ. ಸಚಿವ ಸಂಪುಟ ಪುನಾರಚನೆಗೆ ಪ್ರತಿಕ್ರಿಯಿಸಿದ ಅವರು, ಅದನ್ನ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಹೇಳಿದರು.















