ಮನೆ ರಾಷ್ಟ್ರೀಯ ಗಾಯದ ಮೇಲೆ ಬರೆ: ಜುಲೈ 1 ರಿಂದ ವಿದ್ಯುತ್ ದರ ಏರಿಕೆ

ಗಾಯದ ಮೇಲೆ ಬರೆ: ಜುಲೈ 1 ರಿಂದ ವಿದ್ಯುತ್ ದರ ಏರಿಕೆ

0

ಬೆಂಗಳೂರು(Bengaluru): ಪ್ರಸ್ತುತ ದಿನಗಳಲ್ಲಿ ತೈಲ ಬೆಲೆ ಏರಿಕೆ ನಡುವೆ, ಅಗತ್ಯವಸ್ತುಗಳ  ಬೆಲೆ ಏರಿಕೆ ಸಾಮಾನ್ಯ ಜನರನ್ನು ಕಂಗೆಡಿಸಿದ್ದು, ಈ ನಡುವೆ ವಿದ್ಯುತ್ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜುಲೈ 1ರಿಂದ ವಿದ್ಯುತ್‌ ದರ ಏರಿಕೆ ಮಾಡಲು ಎಸ್ಕಾಂ ನಿರ್ಧರಿಸಿದ್ದು, ವಿದ್ಯುತ್ ದರ 19 ರೂಪಾಯಿಯಿಂದ 31 ರವರೆಗೆ ಏರಿಕೆ ಮಾಡಲು ಎಸ್ಕಾ ತೀರ್ಮಾನಿಸಿದೆ. ‌ಜುಲೈ 1 ರಿಂದ ವಿದ್ಯುತ್ ದರ 19 ರೂ.ಗಳಿಂದ 31 ರೂ.ಗೆ ಏರಿಕೆಯಾಗಲಿದೆ. ಅಂದ್ರೆ ಪ್ರತಿ ತಿಂಗಳು 100 ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು 19 ರೂ.ಯಿಂದ 31 ರೂ. ಪಾವತಿಸಬೇಕು.

ಕಲ್ಲಿದ್ದಲು ದರ ಹೆಚ್ಚಳವಾದ ಹಿನ್ನೆಲೆ ಬೆಲೆ ಏರಿಕೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಎಸ್ಕಾಂಗಳು ಸಲ್ಲಿಸಿದ ದರಗಳು ಹೆಚ್ಚಿತ್ತು. ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಎಸ್ಕಾಂಗಳು ನೀಡಿದ ದರವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.

ಎಷ್ಟು ದರ ಹೆಚ್ಚಳಕ್ಕೆ ಪ್ರಸಾವನೆ?
ಎಸ್ಕಾಂಗಳು ಪ್ರತಿ ಯೂನಿಟ್ ಗೆ 38 ರಿಂದ 35 ರೂ. ದರ ಹೆಚ್ಚಿಸಲು ಅನುಮತಿ ಕೋರಿದ್ದವು. ಬೆಸ್ಕಾಂ 55.28 ರೂ., ಹೆಸ್ಕಾಂ 49.54 ರೂ., ಮೆಸ್ಕಾಂ 38.98 ರೂ., ಸೆಸ್ಕ್ 40.47 ರೂ ಮತ್ತು ಗೆಸ್ಕಾಂ 39.36 ರೂ. ಹೆಚ್ಚು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. 

ಕಲ್ಲಿದ್ದಲು ಅಭಾವದ ಹಿನ್ನೆಲೆ ದರ ಸಹ ಏರಿಕೆಯಾಗುತ್ತಿದೆ. ಇತ್ತ ಶಾಖೋತ್ಪನ್ನ ಕೇಂದ್ರಗಳಲ್ಲಿಯ ಉತ್ಪಾದನೆ ವೆಚ್ಚ ಸಹ ಏರಿಕೆ ಆಗುತ್ತಿರುವ ಹಿನ್ನೆಲೆ ದರ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.

ಇನ್ನು ರಾಜ್ಯದಲ್ಲಿರುವ ಎಲ್ಲಾ ಎಸ್ಕಾಂಗಳು ನಷ್ಟದಲ್ಲಿವೆ ಎಂದು ಹೇಳಲಾಗಿದ್ದು, ಹೀಗಾಗಿ ಆರ್ಥಿಕ ಚೇತರಿಕೆಗೆ ಬೆಲೆ ಏರಿಕೆ ಅನಿವಾರ್ಯ ಎಂಬುವುದು ಎಸ್ಕಾಂಗಳ ವಾದವಾಗಿದೆ.