ಮನೆ ಅಪರಾಧ ಈಶ್ವರ ದೇವಸ್ಥಾನದಲ್ಲಿ ವ್ಯಕ್ತಿಯ ಹತ್ಯೆ: ದೇವಸ್ಥಾನದ ಶುದ್ದೀಕರಣ, ಪ್ರಾಯಶ್ಚಿತದ ಹೋಮ

ಈಶ್ವರ ದೇವಸ್ಥಾನದಲ್ಲಿ ವ್ಯಕ್ತಿಯ ಹತ್ಯೆ: ದೇವಸ್ಥಾನದ ಶುದ್ದೀಕರಣ, ಪ್ರಾಯಶ್ಚಿತದ ಹೋಮ

0

ಮಂಡ್ಯ(Mandya): ಕೆಆರ್ ಪೇಟೆ ಪಟ್ಟಣದ ಈಶ್ವರ ದೇವಾಲಯದಲ್ಲಿ ವ್ಯಕ್ತಿಯೊಬ್ಬರ ಹತ್ಯೆ ನಡೆದ ಕಾರಣಕ್ಕಾಗಿ ದೇವಸ್ಥಾನದ ಶುದ್ದೀಕರಣ ಮತ್ತು ಪ್ರಾಯಶ್ಚಿತ್ತದ ಹೋಮಗಳನ್ನು ಮಂಗಳವಾರ ರಾತ್ರಿ ನಡೆಸಲಾಗಿದ್ದು, ಗುರುವಾರದವರೆಗೆ ವಿವಿಧ ಹೋಮ-ಹವನಾಧಿಗಳು ನಡೆಯಲಿವೆ.

ಈ ಬಗ್ಗೆ ಮಾಹಿತಿ ನೀಡಿರುವ ವೇ.ಬ್ರ.ಗೋಪಾಲಕೃಷ್ಣ ಅವಧಾನಿಗಳು, ಮಂಗಳವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ ಕೂಷ್ಮಾಂಡಾದಿ ಪ್ರಾಯಶ್ಚಿತ್ತ ಹೋಮಗಳು, ಮೃತ್ಯು ಆಕರ್ಷಣ ಹೋಮಗಳನ್ನು ಮಾಡಿ ಮೃತ್ಯು ದೇವರನ್ನು ಮೃತ್ಯುಪಂಚಕ ದ್ರವ್ಯದಲ್ಲಿ ಆಕರ್ಷಣೆಯನ್ನು ಮಾಡಿ ಅನ್ಯ ಸ್ಥಳದಲ್ಲಿ ವಿಸರ್ಜನೆ ಮಾಡಿ, ದಿಸ್ಪಂಧನ ಮಾಡಲಾಗಿದೆ ಎಂದು ಹೇಳಿದರು.

ದುಷ್ಟ ಶಕ್ತಿ ಉಚ್ಛಾಟನೆಯಾಗಿ ರಾಕೋಫ್ಟ್ ಅಘೋರಾಸ್ತ್ರ ಪಾಶುಪತಾಸ್ತ್ರ ಹೋಮಗಳನ್ನು ಮಾಡಿ ದಿಕ್ಷಾಲಕ ಬಲಿ, ರಾಕೋಜ್ಞ, ಅಘೋರಾಸ್ತ್ರ ಪಾಶುಪತಾಸ್ತ್ರ ಬಲಿಯನ್ನು ಅರ್ಚಕರ ಸಮ್ಮುಖದಲ್ಲಿ ನೆರವೇರಿಸಲಾಗಿದೆ. ತಿಲ ಹೋಮ ಗ್ರಹಯಜ್ಞ, ವಾಸ್ತುಹೋಮ ಕ್ಷೇತ್ರ ಪಾಲಕ ಹೋಮ, ಪವಮಾನ ಹೋಮಗಳನ್ನು ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.

ಬುಧವಾರ ಘಟನೆ ಸಂಭವಿಸಿದ ಸ್ಥಳದ ಮಣ್ಣನ್ನು ತೆಗೆದು ಬೇರೆ ಮಣ್ಣನ್ನು ತುಂಬಿ ಬಲಿಪೀಠ ವಿಸರ್ಜನೆ ಮಾಡಿದ ನಂತರ ನೂತನ ಬಲಿಪೀಠ ಸ್ಥಾಪನೆ ಮಾಡಿದ ನಂತರ ನೂತನ ಬಲಿಪೀಠ ಸ್ಥಾಪನೆ ಮಾಡಲಾಗುವುದು. ಸಂಜೆ ಮೂಲ ದೇವರ ಸಂಪ್ರೋಕ್ಷಣಾ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಗುರುವಾರ ಬೆಳಿಗ್ಗೆ ಬ್ರಾಹ್ಮ ಮುಹೂರ್ತದಲ್ಲಿ ಪುನರ್ ಪ್ರತಿಷ್ಠಾಪನೆ, ಹೋಮ, ಕಲಾನ್ಯಾಸ ಪ್ರಧಾನಹೋಮ ನಡೆಸಿ ಪೂರ್ಣಾಹುತಿ ನೆರವೇರಿಸಿದ ನಂತರ ದಿನನಿತ್ಯ ಪೂಜೆ ಆರಂಭವಾಗಲಿದೆ. ದೇವಾಲಯದ ಅರ್ಚಕರಾದ ಮಾಲತೇಶ್ ಭಟ್ಟ,ರೋಹಿತ್ ಶರ್ಮ ಸೇರಿದಂತೆ ವೈದಿಕರ ತಂಡ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ ಎಂದು ಮಾಹಿತಿ ನೀಡಿದರು.