ಬೆಂಗಳೂರು : ನಗರದಲ್ಲಿ ಮತ್ತೆ ಟೋಯಿಂಗ್ ಆರಂಭಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಿದ್ದತೆ ನಡೆಸಿದೆ. ಈಗಾಗಲೇ ಒಂದು ಟೋಯಿಂಗ್ ವಾಹನ ಖರೀದಿಸಿದ್ದು ಉಳಿದ ನಾಲ್ಕು ಪಾಲಿಕೆಗಳಲ್ಲಿ ಶೀಘ್ರವೇ ವಾಹನ ಬರಲಿದೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ಗ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ ಜಾಸ್ತಿಯಾಗಿದೆ. ರಸ್ತೆಬದಿ ಬೀದಿ ಬದಿಗಳಲ್ಲಿ ತಿಂಗಳುಟ್ಟಲೇ ವಾಹನಗಳನ್ನು ಪಾರ್ಕ್ ಮಾಡಿರುತ್ತಾರೆ. ಈಗ ಜಿಬಿಎ ಟ್ರಾಫಿಕ್ ಪೊಲೀಸರ ಸಹಯೋಗದಲ್ಲಿ ಟೋಯಿಂಗ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿದೆ.
ಬೀದಿ ಬದಿ, ಮನೆ ಮುಂಭಾಗ ಫುಟ್ಪಾತ್ಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ಟೋಯಿಂಗ್ ಮಾಡಿ ಮೋಟಾರು ವಾಹನ ಕಾಯ್ದೆ ಪ್ರಕಾರ ದಂಡ ಹಾಕುವುದಷ್ಟೇ ಅಲ್ಲದೇ ಜಿಬಿಎಯಿಂದ ಫುಟ್ಪಾತ್ ಜಾಗ ಬಳಕೆಗೂ ದಂಡ ಹಾಕುತ್ತೇವೆ ಎಂದು ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಐದು ಪಾಲಿಕೆಗಳು ಬರಲಿವೆ. ಪ್ರತಿ ಪಾಲಿಕೆಗೂ ಟೋಯಿಂಗ್ ವಾಹನ ಖರೀದಿಸಿ ಒಂದು ತಿಂಗಳ ಒಳಗಡೆ ಟೆಂಡರ್ ಕರೆದು ಟೋಯಿಂಗ್ ಆರಂಭಿಸಲು ಜಿಬಿಎ ಸಿದ್ಧತೆ ನಡೆಸಿದೆ.
ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಸಂಚಾರಕ್ಕೆ ಸಮಸ್ಯೆ ಆಗುತ್ತಿತ್ತು. ಈಗ ಜಿಬಿಎ ಆ ಸಮಸ್ಯೆ ನಿವಾರಣೆ ಜವಾಬ್ದಾರಿ ಹೊತ್ತಿದ್ದು ಟ್ರಾಫಿಕ್ ಪೊಲೀಸರ ಬದಲಾಗಿ ಜಿಬಿಎ ಮಾಡಲಿರುವ ಟೋಯಿಂಗ್ ಹೇಗಿರಲಿದೆ ಎನ್ನುವುದೇ ಕುತೂಹಲಕಾರಿಯಾಗಿದೆ.














