ಮನೆ ರಾಜ್ಯ ʻಗೃಹಲಕ್ಷ್ಮಿʼ ಕದನ; ಲಕ್ಷ್ಮಿ ಹೆಬ್ಬಾಳ್ಕರ್‌ ಸದನದ ಗೌರವ ಕಳೆದ್ರು – ಆರ್‌.ಅಶೋಕ್‌ ಕಿಡಿ

ʻಗೃಹಲಕ್ಷ್ಮಿʼ ಕದನ; ಲಕ್ಷ್ಮಿ ಹೆಬ್ಬಾಳ್ಕರ್‌ ಸದನದ ಗೌರವ ಕಳೆದ್ರು – ಆರ್‌.ಅಶೋಕ್‌ ಕಿಡಿ

0

ಬೆಳಗಾವಿ : ವಿಧಾನಸಭೆಯಲ್ಲಿಂದು ಎರಡು ತಿಂಗಳ ಗೃಹಲಕ್ಷ್ಮಿ ಕಂತು ಬಾಕಿ ವಿಚಾರ ಕೋಲಾಹಲ ಸೃಷ್ಟಿಸಿತ್ತು. ಈ ವರ್ಷದ ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಕಂತು ಬಂದಿಲ್ಲ ಅಂತ ಮೊನ್ನೆ ಸದನದಲ್ಲಿ ಶಾಸಕ‌ ಮಹೇಶ್ ಟೆಂಗಿನಕಾಯಿ ಕೇಳಿದರು. ಅದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ಕೊಟ್ಟು, ಆಗಸ್ಟ್‌ವರೆಗೂ ಕ್ಲಿಯರ್ ಆಗಿದೆ. ಆಗಸ್ಟ್‌ವರೆಗೆ ಅಂದ್ರೆ ಫೆಬ್ರವರಿ, ಮಾರ್ಚೂ ಸೇರುತ್ತೆ, ಅರ್ಥ ಮಾಡ್ಕೊಳ್ಳಿ ಅಂದಿದ್ರು.

ಈ ಉತ್ತರ ಬಿಜೆಪಿ ನಾಯಕರಿಗೆ ಸಮಾಧಾನ ತಂದಿರಲಿಲ್ಲ. ಇವತ್ತು ಮತ್ತೆ ಸದನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ವಿಚಾರ ಪ್ರಸ್ತಾಪಿಸಿ, ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ಸುಳ್ಳು ಹೇಳಿದ್ದಾರೆ. ಫೆಬ್ರವರಿ, ಮಾರ್ಚ್ ಕಂತು ಬಂದಿದೆ ಅಂತ ಸಚಿವರು ಉತ್ತರ ಕೊಟ್ಟಿದ್ದಾರೆ. ಆದರೆ, ಆ ಎರಡು ಕೊಟ್ಟೇ ಇಲ್ಲ ಅಂತ ಮಹಿಳಾ/ಮಕ್ಕಳ ಕಲ್ಯಾಣ ಇಲಾಖೆಯ ಹಾವೇರಿ, ಗದಗ ಉಪನಿರ್ದೇಶಕರೇ ಅಧಿಕೃತವಾಗಿ ಮಾಹಿತಿ ಕೊಟ್ಟಿದ್ದಾರೆ ಎಂದು ಪತ್ರ ಪ್ರದರ್ಶಿಸಿದ್ರು. ಸಚಿವರು ತಪ್ಪು ಉತ್ತರ ಕೊಟ್ರು. ಸದನದ ಗೌರವ ಕಳೆದ್ರು. ಅವರ ವಿರುದ್ಧ ಹಕ್ಕುಚ್ಯುತಿಗೆ ಕೊಡ್ತೀರಾ? ಪನಿಶ್ಮೆಂಟ್ ಏನು ಅಂತ ವಾಗ್ದಾಳಿ ನಡೆಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಿಎಂ, ಸಚಿವರು ಬಂದಿದೆ ಅಂದಿದ್ದಾರೆ. ಬಂದಿಲ್ಲ ಅಂದ್ರೆ ಕೊಡಿಸೋಣ. ಹೆಚ್ಚು-ಕಮ್ಮಿ ಆಗಿದ್ರೆ ಕೊಡಿಸೋಣ. ಸೋಮವಾರ ಸಚಿವರೇ ಮತ್ತೆ ಉತ್ತರ ಕೊಡ್ತಾರೆ ಅಂದ್ರು. ಸ್ಪೀಕರ್ ಮಾತಾಡಿ, ಸೋಮವಾರ ಸಚಿವರಿಂದ ಉತ್ತರ ಬರಲಿದೆ ಅಂದ್ರು. ಅಲ್ಲಿಗೆ ಈ ವಿಷ್ಯಕ್ಕೆ ತೆರೆ ಬಿತ್ತು. ರಾತ್ರಿ ಎಲ್ಲ ಡಿನ್ನರ್ ಮೀಟಿಂಗ್ ಇದ್ರೆ ಬೆಳಗ್ಗೆ ಏಳೋದು ಲೇಟಾಗುತ್ತೆ. ಸದನಕ್ಕೆ ತಯಾರಾಗದೇ ಹೀಗೆ ತಪ್ಪು ಉತ್ತರ ಕೊಡ್ತಾರೆ. ಹಾಗಾಗಿ ಸದನ ಮುಗಿಯೋವರೆಗೆ ಡಿನ್ನರ್ ಮೀಟಿಂಗ್‌ಗಳನ್ನ ನಡೆಸಬೇಕು ಅಂತ ಅಶೋಕ್ ಕಾಲೆಳೆದ್ರು. ಶಾಸಕ ಸುನೀಲ್ ಕುಮಾರ್ ಮಾತಾಡಿ, ಸಚಿವರು ಸುಳ್ಳು ಹೇಳಿದ್ದಾರೆ.