ಮನೆ ರಾಜ್ಯ ಆರ್ಯನ್‌ ಖಾನ್‌ ಬಂದಿದ್ದ; ಶಿಲ್ಪಾ ಶೆಟ್ಟಿ ಒಡೆತನದ ಪಬ್‌ಗಳ ವಿರುದ್ಧ ಎಫ್‌ಐಆರ್‌

ಆರ್ಯನ್‌ ಖಾನ್‌ ಬಂದಿದ್ದ; ಶಿಲ್ಪಾ ಶೆಟ್ಟಿ ಒಡೆತನದ ಪಬ್‌ಗಳ ವಿರುದ್ಧ ಎಫ್‌ಐಆರ್‌

0

ಬೆಂಗಳೂರು : ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಬಂದಿದ್ದ, ಪಬ್‌ ಹಾಗೂ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಕಬ್ಬನ್ ಪಾರ್ಕ್‌ನ ಎರಡು ಪಬ್‌ಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಇತ್ತೀಚೆಗೆ ಆರ್ಯನ್ ಖಾನ್ ದುರ್ವರ್ತನೆ ತೋರಿದ್ದ ಸೋರ್ ಬೆರ್ರಿ ಪಬ್, ಉದ್ಯಮಿಯಿಂದ ಗಲಾಟೆ ನಡೆದಿದ್ದ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್‌ಗಳ ಮೇಲೆ ಲೇಟ್ ನೈಟ್ ಪಾರ್ಟಿ ಸಂಬಂಧ ಎಫ್‌ಐಆರ್ ದಾಖಲಾಗಿದೆ.

ಎರಡೂ ಘಟನೆಗಳ ನಂತರ ಪಬ್‌ಗಳ ಸಿಸಿಟಿವಿಯನ್ನು ಪೊಲೀಸರು ಪರಿಶೀಲಿಸಿದ್ದರು. ಈ ವೇಳೆ ಪಬ್‌ಗಳಲ್ಲಿ ಲೇಟ್ ನೈಟ್ ಪಾರ್ಟಿ ಆಗುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು‌. ಪರಿಶೀಲನೆ ವೇಳೆ ಪಬ್‌ಗಳಲ್ಲಿ ಲೇಟ್ ನೈಟ್ ಪಾರ್ಟಿ ನಡೆದಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆ ಎರಡೂ ಪಬ್‌ಗಳ ಮೇಲೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ. ನ.30 ರ ರಾತ್ರಿ 1:25 ರವರೆಗೆ ಸೋರ್ ಬೆರ್ರಿ ಪಬ್, ಡಿ.11 ರಂದು ರಾತ್ರಿ 1:30 ರವರಗೆ ಬ್ಯಾಸ್ಟಿಯನ್ ಪಬ್ ಓಪನ್ ಇದ್ದಿದ್ದು ಸಿಸಿಟಿವಿಯಿಂದ ಬಹಿರಂಗವಾಗಿದೆ.