ಬೆಳಗಾವಿ : ಗೃಹಲಕ್ಷ್ಮಿ ಹಣ, ಬಾಕಿ ವಿಚಾರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೊನೆಗೂ ಸತ್ಯ ಒಪ್ಪಿಕೊಂಡಿದ್ದಾರೆ. ಗೃಹಲಕ್ಷ್ಮಿ ಹಣ 2 ತಿಂಗಳ ಹಣ ಬಾಕಿಯಿದೆ. ನನ್ನ ಮಾತಿನಿಂದ ತಪ್ಪಾಗಿದ್ದರೆ, ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದ್ದಾರೆ.
2024-2025ನೇ ಆರ್ಥಿಕ ವರ್ಷದಲ್ಲಿ 2 ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡದೇ ಗೋಲ್ ಮಾಲ್ ಆಗಿರುವ ಅನುಮಾನ ಎದ್ದಿದ್ದು. ಹಣ ಬಿಡುಗಡೆ ಆಗದೇ ಇರೋದಕ್ಕೆ ಆರ್ಥಿಕ ಇಲಾಖೆ ಕಾರಣ ಅಂತ ಆರ್ಥಿಕ ಇಲಾಖೆ ಮೇಲೆ ಗೂಬೆ ಕೂರಿಸುತ್ತಾ ಇತ್ತು. 2 ಇಲಾಖೆ ತಿಕ್ಕಾಟದಿಂದ ಹಣ ಬಾಕಿ ಇದೆ ಅನ್ನೋದರ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲಿಗೆ, ಒಟ್ಟು 23 ಕಂತುಗಳ 46 ಸಾವಿರ ರೂ.ಪಾಯಿಗಳನ್ನು 1.26 ಕೋಟಿ ಮಹಿಳೆಯರ ಖಾತೆಗಳಿಗೆ ಡಿಬಿಟಿ ಮೂಲಕ ಜಮೆ ಮಾಡಿದ್ದೇವೆ. ನಾನು ಸದನದಲ್ಲಿ ಹೇಳಿದ ಹೇಳಿಕೆಗೆ ಈಗಲೂ ಬದ್ಧ. ಕಳೆದ ಆಗಸ್ಟ್ ತಿಂಗಳವರೆಗಿನ ಹಣ ಜಮೆ ಆಗಿದೆ ಅಂತ ಹೇಳಿದ್ದರು.
ಸದನದಲ್ಲೂ ಉತ್ತರ ನೀಡಿದ ಸಚಿವೆ, ರಾಜ್ಯದಲ್ಲಿ ಈ ಯೋಜನೆ ಮೊದಲು ಬಂತು. ಅತ್ಯಂತ ಭಕ್ತಿ ಭಾವದಿಂದ ಈ ಪುಣ್ಯದ ಕೆಲಸ ಮಾಡ್ತಿದೀವಿ. ಇದು ದೇಶಕ್ಕೆ ಮಾದರಿ ಆಗಿದೆ. ಈವರೆಗೆ 23 ಕಂತುಗಳ ಹಣವನ್ನ ಹಾಕಲಾಗಿದೆ. ಆದ್ರೆ ಪದೇ ಪದೇ ಫೆಬ್ರವರಿ ಮಾರ್ಚ್‌ದು ಕೇಳ್ತಿದ್ರು, ನನ್ನ ಪ್ರಕಾರ ಕೊಟ್ಟಿದ್ದೀವಿ ಅಂದುಕೊಂಡಿದ್ದೆ.
ಆದ್ರೆ ಮತ್ತೆ ಪರಿಶೀಲನೆ ಮಾಡಿದಾಗ 2 ತಿಂಗಳ ಹಣ ಬಾಕಿ ಇರೋದು ಕಂಡುಬಂದಿದೆ. ಯಾಕೆ ವ್ಯತ್ಯಯ ಆಗಿದೆ ಅನ್ನೋದನ್ನ ಪರಿಶೀಲನೆ ಮಾಡ್ತೀವಿ. ಮುಂದಿನ ದಿನಗಳಲ್ಲಿ ಪರಿಶೀಲಿಸಿದ್ತೀವಿ, ನನ್ನ ಮಾತಿನಿಂದ ತಪ್ಪಾಗಿದ್ದರೇ ವಿಷಾದ ವ್ಯಕ್ತಪಡಿಸುತ್ತೇನೆ ಅಂತ ಹೇಳಿದ್ದಾರೆ.















