ಚಿಕ್ಕಬಳ್ಳಾಪುರ : ಬೊಲೆರೋ ಹಾಗೂ ಬಲ್ಕರ್ ವಾಹನಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪೇತೇನಹಳ್ಳಿ ಬಳಿ ನಡೆದಿದೆ.
ಬೊಲೆರೋ ಹಾಗೂ ಬಲ್ಕರ್ ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಜಕ್ಕೇನೆಹಳ್ಳಿ ಮೂಲದ 25 ವರ್ಷದ ಅಶೋಕ್ ಸಾವನ್ನಪ್ಪಿದ್ದಾರೆ. ಬಲ್ಕರ್ ವಾಹನ ಸವಾರ ಆಂಧ್ರದ ಸಂಜೀವರಾಯನಪಲ್ಲಿ ನಿವಾಸಿ ನಾಗರಾಜಪ್ಪ ಸಾವಿಗೀಡಾಗಿದ್ದಾರೆ.
ಗೌರಿಬಿದನೂರು ಹಿಂದೂಪುರ ಕಡೆಯಿಂದ ಬೆಂಗಳೂರಿಗೆ ಬರುತಿದ್ದ ಬಲ್ಕರ್ ಲಾರಿ ಬೆಂಗಳೂರಿನಿಂದ ಗೌರಿಬಿದನೂರು ಕಡೆಗೆ ಬರುತಿದ್ದ ಬುಲೆರೊ ವಾಹನಕ್ಕೆ ಡಿಕ್ಕಿಯಾಗಿದೆ. ಮಂಚೆನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















