ಬೆಂಗಳೂರು : ಕಳೆದ ಕೆಲ ದಿನಗಳಿಂದ ಮೊಟ್ಟೆ ಸೇವನೆ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಮೊಟ್ಟೆಯಲ್ಲಿ ಕ್ಯಾನ್ಸರ್ ಇದೆ ಎಂಬ ವದಂತಿ ಜನರಲ್ಲಿ ಸಾಕಷ್ಟು ಭಯವನ್ನುಂಟು ಮಾಡಿದೆ. ಹಬ್ಬಗಳ ಸೀಜನ್‌ನಲ್ಲೂ ಬೇಕರಿ, ಕ್ಯಾಂಡಿಮೆಂಟ್ಸ್ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ.
ರಾಜ್ಯದಲ್ಲಿ ಕಳೆದ ಆರೇಳು ತಿಂಗಳಿನಿಂದ ಬರೀ ಆಹಾರ ಕಲಬೆರಿಕೆ ಚರ್ಚೆ ನಡೆಯುತ್ತಿದೆ. ಕಾಟನ್ ಕ್ಯಾಂಡಿ ಕಲರ್ ಬ್ಯಾನ್‌ನಿಂದ ಶುರುವಾದ ಚರ್ಚೆ ಇಡ್ಲಿ ತನಕ ಬಂದು ನಿಂತಿದೆ. ಹೀಗಾಗಿ ಜನ ಏನು ತಿನ್ಬೇಕು, ಏನ್ ಬಿಡೋದು ಅನ್ನೋ ಗೊಂದಲದಲ್ಲಿದ್ದಾರೆ.
ಇದ್ರ ನಡುವೆ ಜನರಿಗೆ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಅನ್ನೋ ಒಂದು ವಿಡಿಯೋ ಜನರಲ್ಲಿ ಆತಂಕವನ್ನುಂಟುಮಾಡಿದೆ. ಹೀಗಾಗಿ ಮೊಟ್ಟೆ ಬಗ್ಗೆ ಒಂದು ಕ್ಲ್ಯಾರಿಟಿ ಸಿಗುವವರೆಗೂ ಕೆಲವು ಜನ ಮೊಟ್ಟೆ ಹಾಗೂ ಮೊಟ್ಟೆಯಿಂದ ಮಾಡಿದ ಆಹಾರ ಪದಾರ್ಥಗಳ ಸೇವನೆಯಿಂದ ದೂರ ಸರಿದಿದ್ದಾರೆ. ಇದ್ರ ಎಫೆಕ್ಟ್ ವ್ಯಾಪಾರಿಗಳ ಮೇಲೆ ಬಿದ್ದಿದೆ.
ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಸೀಜನ್ ಆಗಿರೋದ್ರಿಂದ ಈ ವದಂತಿ ವ್ಯಾಪಾರಕ್ಕೆ ದೊಡ್ಡ ಹೊಡೆತ ತಂದಿದೆ. ಬೆಂಗಳೂರಿನ ಕಾಂಡಿಮೆಂಟ್ಸ್ ಹಾಗೂ ಬೇಕರಿಗಳಲ್ಲಿ ಒಂದು ಅಂದಾಜಿನಂತೆ 10% ವ್ಯಾಪಾರ ಕಡಿಮೆಯಾಗಿದೆಯಂತೆ. ಬೇಕರಿ ಹಾಗೂ ಕಾಂಡಿಮೆಂಟ್ಸ್ ಗಳಲ್ಲಿ ಜನ ಎಗ್ ಪಪ್ಸ್ ಗಳನ್ನು ತೆಗೆದುಕೊಳ್ಳುದು ಕಡಿಮೆಯಾಗಿದೆ.
ಬೇಕರಿಗಳಲ್ಲಿ ಕೇಕ್ ಆರ್ಡರ್‌ಗಳು ಮೊದಲಿನಷ್ಟು ಬರ್ತಿಲ್ಲವಂತೆ. ಜೊತೆಗೆ ಎಗ್ ಹಾಕಿ ಮಾಡಿದ ಕೇಕ್ ಗಳು ಈ ಬಾರಿ ಸೇಲ್ ಆಗ್ತವೋ ಇಲ್ಲವೋ ಅನ್ನೋ ಗೊಂದಲದಲ್ಲಿ ವ್ಯಾಪಾರಿಗಳಿದ್ದು, ಕೇಕ್ ತಯಾರಿಕೆಗೆ ಹಿಂದೇಟು ಹಾಕ್ತಿದ್ದಾರೆ. ಜೊತೆಗೆ ಎಗ್ ಲೇಸ್ ಕೇಕ್ ತಯಾರಿಕೆಗೆ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.















