ಮನೆ ರಾಜ್ಯ ರಾಜ್ಯದ ಇಂದಿನ ಹವಾಮಾನ ವರದಿ

ರಾಜ್ಯದ ಇಂದಿನ ಹವಾಮಾನ ವರದಿ

0

ಬೆಂಗಳೂರು (Bengaluru): ರಾಜ್ಯದ ಇಂದಿನ (ಜೂ.30) ಹವಾಮಾನ ವರದಿ ಇಂತಿದೆ. ರಾಜಧಾನಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಗುಡುಗು ಮಿಂಚು ಸಹಿತ 115 ಮಿಮೀ.ಯಿಂದ 204 ಮಿಮೀ.ವರೆಗೂ ಮಳೆಯಾಗುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಿರುವ ಕಾರಣ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

ರಾಜ್ಯದ ವಿವಿಧೆಡೆ ಹವಾಮಾನ ವರದಿ:

ಬೆಂಗಳೂರಿನಲ್ಲಿ 27-20, ಮಂಗಳೂರಿನಲ್ಲಿ 28-24, ಶಿವಮೊಗ್ಗದಲ್ಲಿ 27-22, ಬೆಳಗಾವಿಯಲ್ಲಿ 25-21, ಮೈಸೂರಿನಲ್ಲಿ 27-19, ಮಂಡ್ಯದಲ್ಲಿ 29-21, ಕೊಡಗಿನಲ್ಲಿ 22-18, ರಾಮನಗರದಲ್ಲಿ 29-21, ಹಾಸನದಲ್ಲಿ 25-19, ಚಾಮರಾಜನಗರದಲ್ಲಿ 28-21, ಚಿಕ್ಕಬಳ್ಳಾಪುರದಲ್ಲಿ 28-20, ಕೋಲಾರದಲ್ಲಿ 29-21, ತುಮಕೂರಿನಲ್ಲಿ 28-20, ಉಡುಪಿಯಲ್ಲಿ 28-24, ಕಾರವಾರದಲ್ಲಿ 28-25, ಚಿಕ್ಕಮಗಳೂರಿನಲ್ಲಿ 23-19, ದಾವಣಗೆರೆಯಲ್ಲಿ 28-22, ಚಿತ್ರದುರ್ಗದಲ್ಲಿ 28-21, ಹಾವೇರಿಯಲ್ಲಿ 28-22, ಬಳ್ಳಾರಿಯಲ್ಲಿ 32-23, ಗದಗದಲ್ಲಿ 28-22, ಕೊಪ್ಪಳದಲ್ಲಿ 31-23, ರಾಯಚೂರಿನಲ್ಲಿ 32-24, ಯಾದಗಿರಿಯಲ್ಲಿ 32-24, ವಿಜಯಪುರದಲ್ಲಿ 30-22, ಬೀದರ್ ನಲ್ಲಿ 29-22, ಕಲಬುರಗಿಯಲ್ಲಿ 31-23, ಬಾಗಲಕೋಟೆಯಲ್ಲಿ 31-23 ಡಿಗ್ರಿ ಸೆಲ್ಸಿಯಸ್‌ ಇದೆ.