ಬೆಂಗಳೂರು : ಎ ಖಾತಾ ವಿತರಣೆಯನ್ನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಶುರು ಮಾಡಿದೆ. ಎ ಖಾತಾ ಪರಿವರ್ತನೆಗೆ ಅರ್ಜಿ ಸಲ್ಲಿಸಲು ಜಿಬಿಎ 100 ದಿನಗಳ ಕಾಲಾವಕಾಶ ನೀಡಿತ್ತು. ಆ ಸಮಯ ಸಮೀಪಿಸುತ್ತಾ ಇದೆ. ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ 3 ಸಾವಿರ ಅರ್ಜಿ ಸಲ್ಲಿಕೆಯಾಗಿತ್ತು. ಅದರಲ್ಲಿ 35 ಅರ್ಜಿಗಳನ್ನ ಪರಿಶೀಲನೆ ಮಾಡಿ ವಿತರಣೆ ಮಾಡಿದೆ.
ಅರ್ಜಿಗಳನ್ನ ಪರಿಶೀಲನೆ ಮಾಡಿ ಜಿಬಿಎ ಎ ಖಾತಾ ವಿತರಣೆಗೆ ಮುಂದಾಗಿದೆ. ಏಳೂವರೆ ಲಕ್ಷ ಬಿ ಖಾತಾಗಳಿದ್ದು ಅದರಲ್ಲಿ ಬರೀ 3 ಸಾವಿರ ಮಂದಿಯಷ್ಟೇ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಜನ ಅರ್ಜಿ ಸಲ್ಲಿಕೆಗೆ ನಿರಾಸಕ್ತಿ ತೋರಿಸುತ್ತಾ ಇದ್ದಾರೆ. ಹೀಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನ ತ್ವರಿತವಾಗಿ ಪರಿಶೀಲನೆ ಮಾಡಿ ಎ ಖಾತಾ ವಿತರಣೆ ಮಾಡುತ್ತುದೆ.
ಅರ್ಜಿ ಸಲ್ಲಿಕೆಗೆ 100 ದಿನ ಇದ್ದ ಕಾಲಾವಕಾಶವನ್ನು ವಿಸ್ತರಣೆ ಮಾಡೋದಕ್ಕೆ ಜಿಬಿಎ ಚಿಂತನೆ ನಡೆಸಿದೆ. ಆದರೆ ಗೈಡ್ ಲೈನ್ಸ್ ವ್ಯಾಲ್ಯೂ 5% ಕಡಿತ ಮಾಡೋದಕ್ಕೆ ಸಾಧ್ಯವೇ ಇಲ್ಲ ಅನ್ನೋ ನಿರ್ಧಾರಕ್ಕೆ ಜಿಬಿಎ ಬಂದಿದೆ.















