ಮನೆ ಪ್ರಕೃತಿ ನಾಗರಹೊಳೆ ಸರಹದ್ದಿನಲ್ಲಿ ಹೆಣ್ಣು ಕಾಡಾನೆ ಸಾವು

ನಾಗರಹೊಳೆ ಸರಹದ್ದಿನಲ್ಲಿ ಹೆಣ್ಣು ಕಾಡಾನೆ ಸಾವು

0

ಕೊಡಗು(Kodagu): ಗಡಿಭಾಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸಮೀಪದಲ್ಲಿರುವ ಬಾಳೆಲೆ ವ್ಯಾಪ್ತಿಯ ಸುಳುಗೋಡುವಿನ ಕಾಫಿ ತೋಟದಲ್ಲಿ ಹೆಣ್ಣಾನೆಯೊಂದು ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ತಿತಿಮತಿ ವಲಯದ ಅರಣ್ಯ ಅಧಿಕಾರಿಗಳಾದ ಎಸಿಎಪ್  ಉತ್ತಪ್ಪ, ಆರ್ ಎಪ್ ಒ ಅಶೋಕ್ ಹುನಗುಂದ ಚೇತನ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸುಮಾರು 25 ವರ್ಷ ಪ್ರಾಯದ ಹೆಣ್ಣು ಕಾಡಾನೆ ಮೃತಪಟ್ಟು ಅಂದಾಜು ಒಂದು ವಾರ ಕಳೆದಿರಬಹುದೆಂದು ಸ್ಥಳಕ್ಕೆ ಭೇಟಿ ನೀಡಿದ ನಾಗರಹೊಳೆ ವನ್ಯಜೀವಿ ವಿಭಾಗದ ಡಾ.ಚಿಟ್ಯಪ್ಪ ಮಾಹಿತಿ ನೀಡಿದ್ದಾರೆ.