ಮನೆ ರಾಜ್ಯ ಚಿತ್ರದುರ್ಗ ಬಸ್ ದುರಂತ; ಕಿಟಕಿಯಿಂದ ಹಾರಿ ಪ್ರಾಣ ಉಳಿಸಿಕೊಂಡ ದಂಪತಿ

ಚಿತ್ರದುರ್ಗ ಬಸ್ ದುರಂತ; ಕಿಟಕಿಯಿಂದ ಹಾರಿ ಪ್ರಾಣ ಉಳಿಸಿಕೊಂಡ ದಂಪತಿ

0

ಬೆಂಗಳೂರು/ಚಿತ್ರದುರ್ಗ : ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ದಂಪತಿ ತಮ್ಮ ಮಗು ಸಮೇತ ಕಿಟಕಿಯಿಂದ ಹೊರಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಚಿತ್ರದುರ್ಗ ಬಸ್ ದುರಂತದಲ್ಲಿ ಹೇಮರಾಜ್ ಕುಟುಂಬ ಅದೃಷ್ಟವಶಾತ್ ಬದುಕುಳಿದಿದೆ.

ಈ ದುರಂತದಿಂದ ಜೀವ ಉಳಿಸಿಕೊಂಡ ಕುಟುಂಬ ಇದೀಗ ‘ಪಬ್ಲಿಕ್ ಟಿವಿ’ಯ ಜೊತೆ ಅಪಘಾತದ ಭೀಕರತೆಯನ್ನು ಬಿಚ್ಚಿಟ್ಟಿದೆ. ಬಸ್ ಚಾಲಕನ ಹಿಂಬದಿಯ ಸೀಟ್‌ನಲ್ಲಿ ಮಲಗಿದ್ದ ವೇಳೆ ಏಕಾಏಕಿ ಏನೋ ಬಿದ್ದ ಅನುಭವವಾಗಿದೆ. ಎದ್ದು ನೋಡಿದ ಕೂಡಲೇ ಬಸ್ ಹಿಂದೆ ಬೆಂಕಿ ಹತ್ತಿಕೊಂಡು ಜನ ಕಿರುಚಾಡಿ, ಹೊರ ಬರಲು ಪ್ರಯತ್ನಿಸುತ್ತಿದ್ದರು ಅಂತ ಘಟನೆಯ ಬಗ್ಗೆ ದಂಪತಿ ಹಂಚಿಕೊಂಡಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹೇಮರಾಜ್ ದಂಪತಿ ಗೋಕರ್ಣಕ್ಕೆ ಪ್ರಯಾಣ ಮಾಡುತ್ತಿದ್ದರು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಸ್ಸಿನ ಕಿಟಕಿಯನ್ನ ಒಡೆದು, ಅದರೊಳಗಿಂದ ಜಿಗಿದು ಜೀವ ಉಳಿಸಿಕೊಂಡಿದ್ದಾರೆ. ಮೊದಲಿಗೆ 8 ವರ್ಷದ ಮಗನನ್ನ ಇಳಿಸಿ ಬಳಿಕ ದಂಪತಿ ಹೊರ ಬಂದಿದ್ದಾರೆ. ಬಸ್ ಸುಟ್ಟ ವಾಸನೆಯಿಂದ ಉಸಿರಾಟಕ್ಕೂ ಸಮಸ್ಯೆಯಾಗುತ್ತಿತ್ತು. ಬಸ್‌ನಿಂದ ಹೊರ ಬಂದ ಕೆಲವೇ ಸಮಯದಲ್ಲಿ ಬಸ್ ಸ್ಫೋಟವಾಗಿದೆ ಎಂದು ದಂಪತಿ ತಿಳಿಸಿದ್ದಾರೆ. ಸದ್ಯ ದಂಪತಿ ಬೆಂಗಳೂರಿನ ಸರ್ಜಾಪುರ ರಸ್ತೆಯ ತಮ್ಮ ನಿವಾಸಕ್ಕೆ ಮರಳಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.