ಮನೆ ರಾಜ್ಯ ನ್ಯೂಇಯರ್‌ಗೆ ಕೌಂಟ್‌ಡೌನ್ ಶುರು – ಪಬ್, ಬಾರ್ & ರೆಸ್ಟೋರೆಂಟ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೆ ಅನುಮತಿ..!

ನ್ಯೂಇಯರ್‌ಗೆ ಕೌಂಟ್‌ಡೌನ್ ಶುರು – ಪಬ್, ಬಾರ್ & ರೆಸ್ಟೋರೆಂಟ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೆ ಅನುಮತಿ..!

0

ಬೆಂಗಳೂರು : ಹೊಸವರ್ಷಕ್ಕೆ ದಿನಗಣನೆ ಶುರುವಾಗಿದ್ದು, ಖಾಕಿ ಪಡೆ ಫುಲ್ ಅಲರ್ಟ್ ಆಗಿದೆ. ಈಗಾಗಲೇ ನಗರದ ಪ್ರಮುಖ ಪ್ರದೇಶಗಳಲ್ಲಿ ರೌಂಡ್ಸ್ ಮಾಡಿ, ಪರಿಶೀಲನೆ ನಡೆಸಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌, ಬಳಿಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.

ಪಬ್, ಕ್ಲಬ್, ರೆಸ್ಟೋರೆಂಟ್ ಮಾಲೀಕರ ಜೊತೆಗೆ ಸೀಮಂತ್ ಕುಮಾರ್, ನ್ಯೂ ಇಯರ್ ವೇಳೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸಭೆ ಬಳಿಕ ಮಾತನಾಡಿದ ಸೀಮಂತ್ ಕುಮಾರ್ ಸಿಂಗ್, ಸುಮಾರು 30 ಅಂಶಗಳ ಮಾರ್ಗಸೂಚಿ ನೀಡಿದ್ದೀವೆ. ಕ್ಲೌಡ್ ಕಂಟ್ರೋಲ್, ಏಜ್ ಲಿಮಿಟ್ಸ್, ಸಮಯ, ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ, ಶಬ್ಧ ಮಾಲಿನ್ಯ, ಹೆಣ್ಮಕ್ಕಳ ಸೇಫ್ಟಿ ಸೇರಿ 30 ಪಾಯಿಂಟ್ಸ್ ಹೇಳಲಾಗಿದೆ, ಅವುಗಳನ್ನ ಒಪ್ಪಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ಆಗದಂತೆ ಸೂಚನೆ ಕೊಟ್ಟಿದ್ದೀವಿ ಎಂದು ತಿಳಿಸಿದ್ದಾರೆ.

ಬೌನ್ಸರ್‌ಗಳ ಬಗ್ಗೆ ಕೆಲ ದೂರುಗಳಿದ್ದು, ಮಾಲೀಕರಿಗೆ ತಿಳಿ ಹೇಳಿದ್ದೇವೆ. ಎಂಟ್ರಿ, ಎಕ್ಸಿಟ್ ಬಗ್ಗೆ ಫೈರ್ ಸೇಫ್ಟಿ, ಪಾರ್ಕಿಂಗ್, ಎಮರ್ಜೆನ್ಸಿ ಕಾಂಟ್ಯಾಕ್ಟ್, ಹೀಗೆ ಎಲ್ಲದರ ಬಗ್ಗೆಯೂ ಸೂಚನೆ ನೀಡಲಾಗಿದೆ. ರೇವ್ ಪಾರ್ಟಿ, ಇಲ್ಲೀಗಲ್ ಪಾರ್ಟಿ ಬಗ್ಗೆ ಡಿಸ್ಪ್ಲೇ ಮಾಡಬಾರದು.

ಪಟಾಕಿ, ವೆಪೆನ್‌ಗಳು ಇರಬಾರ್ದು. ಹೋಗಿ ಬರುವ ಜನರಿಗೆ ಸರತಿ ಸಾಲು ಇರಬೇಕು. ಅವರ ಮ್ಯಾನೇಜರ್, ಸಿಬ್ಬಂದಿ ಮದ್ಯಪಾನ ಮಾಡಿರಬಾರದು. ಹೀಗೆ ಹಲವು ಸೂಚನೆಗಳನ್ನ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಹೆಚ್ಚು ಸಮಯ ಓಪನ್ ಮಾಡಲು ಮನವಿ ಮಾಡಿದರು. ಆಗಲ್ಲ ಒಂದುಗಂಟೆಗೆ ಕ್ಲೋಸ್ ಇರಬೇಕು ಎಂದು ಸೂಚಿಸಿದ್ದೇವೆ. ಜವಾಬ್ದಾರಿಯಿಂದ ಆಚರಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಅಂತಾ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.