ಮನೆ ಅಂತಾರಾಷ್ಟ್ರೀಯ ರಸ್ತೆ ಬದಿ ನಮಾಜ್‌; ಪ್ಯಾಲೆಸ್ತೀನ್‌ ವ್ಯಕ್ತಿಗೆ ವಾಹನ ಡಿಕ್ಕಿ ಹೊಡೆಸಿದ ಇಸ್ರೇಲಿ ಸೈನಿಕ..!

ರಸ್ತೆ ಬದಿ ನಮಾಜ್‌; ಪ್ಯಾಲೆಸ್ತೀನ್‌ ವ್ಯಕ್ತಿಗೆ ವಾಹನ ಡಿಕ್ಕಿ ಹೊಡೆಸಿದ ಇಸ್ರೇಲಿ ಸೈನಿಕ..!

0

ಜೆರುಸಲೇಮ್ : ರಸ್ತೆ ಬದಿಯಲ್ಲಿ ಕುಳಿತು ನಮಾಜ್‌ ಮಾಡುತ್ತಿದ್ದ ಪ್ಯಾಲೆಸ್ತೀನ್‌ ವ್ಯಕ್ತಿಗೆ ಇಸ್ರೇಲಿ ಸೈನಿಕನೊಬ್ಬ ವಾಹನದಿಂದ ಡಿಕ್ಕಿ ಹೊಡೆಸಿರುವ ಘಟನೆ ನಡೆದಿದೆ. ಈ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆಕ್ರಮಿತ ಪಶ್ಚಿಮ ದಂಡೆಯಲ್ಲಿ ರಸ್ತೆಯ ಪಕ್ಕದಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಪ್ಯಾಲೆಸ್ತೀನಿಯನ್ ವ್ಯಕ್ತಿಗೆ, ರೈಫಲ್ ಹಿಡಿದುಕೊಂಡು ಇಸ್ರೇಲಿ ಮೀಸಲು ಪಡೆಯ ಸೈನಿಕನೊಬ್ಬ ಎಟಿವಿ ವಾಹವನ್ನು ಡಿಕ್ಕಿ ಹೊಡೆದಿದ್ದಾನೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಶಸ್ತ್ರಸಜ್ಜಿತ ಸೈನಿಕ ಪ್ಯಾಲೆಸ್ತೀನಿಯನ್ ವ್ಯಕ್ತಿಗೆ ವಾಹನದಿಂದ ಡಿಕ್ಕಿ ಹೊಡೆಸಿದ್ದಾರೆ. ನಂತರ ಇಲ್ಲಿಂದ ಹೊರಡುವಂತೆ ಸೂಚಿಸಿದ್ದಾನೆ. ಈತ ಮೀಸಲು ಪಡೆಯ ಸಿಬ್ಬಂದಿಯಾಗಿದ್ದು, ಅವರ ಮಿಲಿಟರಿ ಸೇವೆಯನ್ನು ಕೊನೆಗೊಳಿಸಲಾಗಿದೆ ಎಂದು ಸೇನೆ ತಿಳಿಸಿದೆ.

ಸೈನಿಕ ತನ್ನ ಅಧಿಕಾರವನ್ನು ಉಲ್ಲಂಘಿಸಿ ವರ್ತಿಸಿದ್ದಾರೆ. ಆತನ ಬಳಿಯಿದ್ದ ಶಸ್ತ್ರಾಸ್ತ್ರವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಾಹನ ಡಿಕ್ಕಿ ಹೊಡೆದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ.

ಈ ವರ್ಷ ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೀನಿಯನ್ನರ ವಿರುದ್ಧ ಹೆಚ್ಚಿನ ಸಂಖ್ಯೆಯಲ್ಲಿ ಇಸ್ರೇಲಿ ನಾಗರಿಕ ದಾಳಿಗಳಾಗಿವೆ. 750 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಅಂಕಿಅಂಶಗಳು ತಿಳಿಸಿವೆ.