ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಫ್ಯಾನ್ಸ್ ವಾರ್, ಸ್ಟಾರ್ ಗಾಳಿ ಜೋರಾಗಿದೆ. ಸುದೀಪ್ ಹುಬ್ಬಳ್ಳಿ ವೇದಿಕೆ ಮೇಲೆ ಮಾತಾಡಿದ ಮಾತುಗಳು ಸಾಕಷ್ಟು ಸಂಚಲನವನ್ನು ಸೃಷ್ಟಿ ಮಾಡಿದ್ದವು. ನಂತರ ವಿಜಯಲಕ್ಷ್ಮಿ ದಾವಣಗೆರೆಯಲ್ಲಿ ನಿಂತು ಸುದೀಪ್ ಮಾತಿಗೆ ಟಕ್ಕರ್ ಕೊಟ್ಟಿದ್ದರು.
ಈ ಮಾತಿನ ಬೆನ್ನಲ್ಲೇ ವಿಜಯಲಕ್ಷ್ಮಿ ಬಗ್ಗೆ ಕೆಟ್ಟದಾಗಿ, ಅಶ್ಲೀಲ ಕಮೆಂಟ್ ಮಾಡಿದ್ರು ಕೆಲ ಕಿಡಿಗೇಡಿಗಳು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಆ ಬಗ್ಗೆ ಕಮಿಷನರ್ ಭೇಟಿ ಮಾಡಿ ದೂರು ಸಹ ದಾಖಲಿಸಿದ್ದರು. ದೂರು ದಾಖಲಿಸಿದ ಬಳಿಕ ಅಶ್ಲೀಲ ಕಮೆಂಟ್ಸ್ ಮಾಡಿದವರ ಸೋಶಿಯಲ್ ಮೀಡಿಯಾ ಪೋಸ್ಟ್ ಗಳ ಸ್ಕ್ರೀನ್ ಶಾಟ್ ತೆಗೆದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಅದ್ರಲ್ಲಿ ಕ್ಲಾಸ್ ಫ್ಯಾನ್ಸ್ ಅನ್ನೋ ಕೋಟ್ ಮಾಡಿದ್ದು ಮತ್ತಷ್ಟು ಚರ್ಚೆಗೆ ಕಾರಣವಾಗಿತ್ತು. ಇದೆಕ್ಕೆಲ್ಲ ಈಗ ಕಿಚ್ಚ ಸುದೀಪ್ ಉತ್ತರ ನೀಡಿದ್ದಾರೆ. ಕಪಾಳಕ್ಕೆ ಹೊಡಿಸ್ಕೊಳ್ಳುವಷ್ಟು ಒಳ್ಳೆಯವನಲ್ಲ. ಪ್ರೀತಿಯಿಂದ ತಾಯಿ ಹೊಡಿಯೋದು ಬೇರೆ.. ಪಕ್ಕದ ಮನೆಯವರು ಹೊಡೆದ್ರೆ ಸುಮ್ಮನಿರುವಷ್ಟು ಒಳ್ಳೆಯವನು ನಾನಲ್ಲ ಎಂದಿದ್ದಾರೆ.
ನಾನು ಜಗಳ ಮಾಡೋಕೆ ಇಂಡಸ್ಟ್ರಿ ಗೆ ಬಂದಿಲ್ಲ, ಮೇಕಪ್ ಹಾಕೊಂಡು ಎಲ್ಲರನ್ನ ನಗಿಸೋಕೆ, ಎಂಟರ್ಟೈನ್ಮೆಂಟ್ ಮಾಡೋಕೆ ಸಿನಿಮಾ ಇಂಡಸ್ಟ್ರಿಗೆ ಬಂದಿರೋದು. ನನ್ನದನ್ನ ನಾನು ಮಾತಾಡಬಲ್ಲೆ, ಎಂಟೈರ್ ಇಂಡಸ್ಟ್ರಿ ಚನಾಗಿದ್ದೀವಿ. ಕಿಚ್ಚ ಸುದೀಪ್ ನನ್ನಲ್ಲಿ ಹುಡುಗ್ರು ಸರಿ ಇಲ್ಲ ಅಂದ್ರೆ ಸರಿ ಪಡಿಸಿಕೊಳ್ಳೋಣ ಅದು ಬಿಟ್ಟು ಯುದ್ದ, ಜಗಳ ಅಂತಾ ಮಾಡೋಕೆ ಬಂದಿಲ್ಲ ಎಂದಿದ್ದಾರೆ.














