ಮನೆ ರಾಜ್ಯ ಬಂಡೀಪುರ; ಹುಲಿ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ

ಬಂಡೀಪುರ; ಹುಲಿ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ

0

ಚಾಮರಾಜನಗರ : ಹುಲಿ ದಾಳಿಯಿಂದ ಅರಣ್ಯ ಇಲಾಖೆಯ ವಾಚರ್ ಸಾವನ್ನಪ್ಪಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಡೆದಿದೆ.

ಹುಲಿ ದಾಳಿಗೆ ಬಲಿಯಾದ ವಾಚರ್‌ನ್ನು ಸಣ್ಣಹೈದ ಎಂದು ಗುರುತಿಸಲಾಗಿದೆ. ಅವರು ಬಂಡೀಪುರದ ಮರಳಳ್ಳ ಕ್ಯಾಂಪ್ ಸಮೀಪ ಗಸ್ತಿಗೆ ಹೋಗಿದ್ದರು. ಈ ವೇಳೆ ಹುಲಿ ದಾಳಿ ನಡೆಸಿ ಅವರನ್ನು ಕೊಂದು ಹಾಕಿದೆ.

ಸಣ್ಣಹೈದ ಅವರು ಕಳೆದ 8 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹುಲಿ ದಾಳಿ ನಡೆಸಿದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.