ಮನೆ ರಾಜ್ಯ ಪೊಲೀಸರ ಕಣ್ಣಿಗೆ ಬಿದ್ದ ಚಿರತೆ; ಗ್ರಾಮಸ್ಥರಲ್ಲಿ ಆತಂಕ..!

ಪೊಲೀಸರ ಕಣ್ಣಿಗೆ ಬಿದ್ದ ಚಿರತೆ; ಗ್ರಾಮಸ್ಥರಲ್ಲಿ ಆತಂಕ..!

0

ಮೈಸೂರು : ಪೊಲೀಸರು ನೈಟ್​​​ ರೌಂಡ್ಸ್​​​​​ ಹೋಗುತ್ತಿದ್ದ, ವೇಳೆ ಚಿರತೆಯೊಂದು ಅವರ ಕಣ್ಣಿಗೆ ಬಿದ್ದಿದೆ. ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಂಜನಗೂಡು ತಾಲ್ಲೂಕಿನ ಹಳೇಪುರ ಗ್ರಾಮದಲ್ಲಿ ಈ ಚಿರತೆ ಕಂಡು ಬಂದಿದೆ. ಕವಲಂದೆ ಪೊಲೀಸರು ಈ ವಿಡಿಯೋವನ್ನು ಮಾಡಿದ್ದಾರೆ. ಹಳೇಪುರದಿಂದ ಕೆಬ್ಬೇಪುರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಚಿರತೆ ಕಾಣಿಸಿಕೊಂಡಿದೆ.

ರಾತ್ರಿ ಸಮಯದಲ್ಲಿ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು, ಎಸ್.ಬಿ ರಮೇಶ್ ಮತ್ತು ಸಿಬ್ಬಂದಿ ನೈಟ್ ರೌಂಡ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಚಿರತೆಯೊಂದು ಕೂತಿರುವುದು ಕಂಡು ಬಂದಿದೆ, ತಕ್ಷಣವೇ ಜೀಪ್​​ನ್ನು ಹಿಂದಕ್ಕೆ ತೆಗೆದುಕೊಂಡು ನಿರ್ಜನ ಪ್ರದೇಶದಲ್ಲಿ ಚಿರತೆ ಕುಳಿತಿರುವುದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಈ ಭಾಗದಲ್ಲೂ ಕೂಡ ಚಿರತೆ ಕಾಟ ಶುರುವಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟು ಚಿರತೆಯನ್ನು ಸೆರೆ ಹಿಡಿಯಬೇಕು ಅರಣ್ಯ ಇಲಾಖೆಗೆ ಸ್ಥಳೀಯರ ಒತ್ತಾಯ ಮಾಡಿದ್ದಾರೆ. ಇನ್ನು ಮೈಸೂರಿನ ಹೆಚ್‌ಡಿ ಕೋಟೆ ತಾಲೂಕಿನ ಮೇಟಿಕುಪ್ಪೆ ವಲಯದಲ್ಲಿ 2 ಹುಲಿಗಳನ್ನು ಸೇರಿ ಹಿಡಿಯಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಮೇಟಿಕುಪ್ಪೆ ವಲಯಮೇಟಿಕುಪ್ಪೆಯ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದ್ದ ಹುಲಿಗಳನ್ನು ಸೆರೆಹಿಡಿಯಾಲಾಗಿದೆ.