ಮನೆ ರಾಜ್ಯ ಹುಟ್ಟೂರಲ್ಲಿ ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಹೆಚ್‌.ಡಿ ದೇವೇಗೌಡ್ರು

ಹುಟ್ಟೂರಲ್ಲಿ ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಹೆಚ್‌.ಡಿ ದೇವೇಗೌಡ್ರು

0

ಹಾಸನ : ಹೊಳೆನರಸೀಪುರ ತಾಲೂಕಿನ ಹುಟ್ಟೂರು ಹರದನಹಳ್ಳಿ ಗ್ರಾಮದ ಮನೆ ದೇವರು ದೇವೇಶ್ವರನ ಸನ್ನಿಧಿಯಲ್ಲಿ ಇಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ಗ್ರಾಮಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದರು. ಬಳಿಕ ದೇವಸ್ಥಾನಕ್ಕೆ ಭೇಟಿ ಕೊಟ್ಟು ಹೋಮ, ಹವನದಲ್ಲಿ ಪಾಲ್ಗೊಂಡರು. ಈ ವೇಳೆ ಪುತ್ರ ಹೆಚ್.ಡಿ.ರೇವಣ್ಣ, ಭವಾನಿ ರೇವಣ್ಣ ಹಾಗೂ ಶಾಸಕ ಹೆಚ್.ಪಿ.ಸ್ವರೂಪ್‍ಪ್ರಕಾಶ್ ಸಾಥ್ ನೀಡಿದರು.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಹಾಸನದಲ್ಲಿ ಜೆಡಿಎಸ್‌ ಕಾರ್ಯಕರ್ತರ ಸಮಾವೇಶಕ್ಕೆ ಅವರು ಆಗಮಿಸಿದ್ದರು. ಸಮಾವೇಶಕ್ಕೂ ಮೊದಲು ದೇವರ ದರ್ಶನ ಪಡೆದರು. ಒಂದು ವರ್ಷದ ಹಿಂದೆ ಅವರು ದೇವೇಶ್ವರನ ದರ್ಶನ ಪಡೆದಿದ್ದರು. ಅದಾದ ಬಳಿಕ ಅವರು ದೇವರ ದರ್ಶನ ಪಡೆದರು.