ಮನೆ ರಾಷ್ಟ್ರೀಯ ಕೇರಳ ತಲುಪಿದ ಸಿಎಂ ಸಿದ್ದರಾಮಯ್ಯ – ಕಲಾತಂಡಗಳಿಂದ ಸ್ವಾಗತ

ಕೇರಳ ತಲುಪಿದ ಸಿಎಂ ಸಿದ್ದರಾಮಯ್ಯ – ಕಲಾತಂಡಗಳಿಂದ ಸ್ವಾಗತ

0

ಕೇರಳ : ಶಿವಗಿರಿ ತೀರ್ಥಾಟನೆ ಸಮಾವೇಶದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಕೇರಳಕ್ಕೆ ಆಗಮಿಸಿದ್ದಾರೆ. ಇಂದು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ನಾಯಕರು, ಕಲಾ ತಂಡಗಳ ಸದಸ್ಯರು ಸ್ವಾಗತಿಸಿದರು.

ತಿರುವನಂತಪುರಂನಲ್ಲಿ ವಾಸ್ತವ್ಯ ಹೂಡಲಿರುವ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರ ಆಹ್ವಾನದ ಮೇರೆಗೆ ಕೇರಳದ ಶಿವಗಿರಿಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

ನಾರಾಯಣ ಧರ್ಮ ಸಂಘ ಆಯೋಜಿಸುತ್ತಿರುವ ಈ ಕಾರ್ಯಕ್ರಮದಲ್ಲಿ ವೇಣುಗೋಪಾಲ್ ಭಾಗವಹಿಸಲಿದ್ದಾರೆ. ಡಿಸೆಂಬರ್‌ ತಿಂಗಳಿನಲ್ಲಿ ಎರಡನೇ ಬಾರಿ ಸಿದ್ದರಾಮಯ್ಯ ಮತ್ತು ಕೆಸಿ ವೇಣುಗೋಪಾಲ್‌ ಬ್ರಹ್ಮಶ್ರೀ ನಾರಾಯಣ ಗುರುಗಳ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಡಿಸೆಂಬರ್ 3ರಂದು ದಕ್ಷಿಣ ಕನ್ನಡದ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕೇರಳದ ವರ್ಕಲಾದಲ್ಲಿರುವ ಶಿವಗಿರಿ ಮಠದಲ್ಲಿ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಶ್ರೀ ನಾರಾಯಣ ಗುರುಗಳ ಸ್ಮರಣಾರ್ಥ ಆಯೋಜಿಸಲಾಗುವ ಮಹಾ ಯಾತ್ರೆಯಾಗಿದ್ದು, ದೇಶದಾದ್ಯಂತದಿಂದ ಭಕ್ತರು ಪಾದಯಾತ್ರೆ ಮೂಲಕ ಶಿವಗಿರಿಗೆ ತಲುಪಿ, ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಿ, ಅಲ್ಲಿಂದ ಪವಿತ್ರ ತೀರ್ಥವನ್ನು ತೀರ್ಥಯಾತ್ರೆಯ ಮೂಲಕ ಹಿಂತಿರುಗಿಸುತ್ತಾರೆ.