ಮನೆ ರಾಷ್ಟ್ರೀಯ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ..!

ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ..!

0

ನವದೆಹಲಿ : ಹೊಸ ವರ್ಷಕ್ಕೆ ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆಯ ಶಾಕ್ ಸಿಕ್ಕಿದೆ. 2025ರಲ್ಲಿ 200 ರೂಗೂ ಹೆಚ್ಚು ಇಳಿಕೆ ಕಂಡಿದ್ದ ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಬೆಲೆ ಏರಿಕೆ ಆಗಿದೆ. ಆದರೆ, ಗೃಹಬಳಕೆ ಗ್ಯಾಸ್ ಬೆಲೆಯಲ್ಲಿ ಏರಿಕೆ ಆಗಿಲ್ಲ. 19 ಕಿಲೋ ಮತ್ತು 47.50 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್​ಗಳು ದುಬಾರಿಯಾಗಿವೆ. 19 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆ 110 ರೂನಿಂದ 112 ರೂನಷ್ಟು ಏರಿದೆ. ಬೆಂಗಳೂರಿನಲ್ಲಿ 110.50 ರೂ ಬೆಲೆ ಹೆಚ್ಚಳ ಆಗಿದೆ.

ಇನ್ನು, 47.50 ಕಿಲೋ ತೂಕದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 274.50 ರೂ ಏರಿಕೆ ಆಗಿದ್ದು, 4,407 ರೂ ಗಡಿ ಮುಟ್ಟಿದೆ. ಬೆಂಗಳೂರಿನಲ್ಲಿ 2026ರ ಜನವರಿಯಲ್ಲಿ ವಿವಿಧ ಎಲ್​ಪಿಜಿ ದರ, 14.2 ಕಿಲೋ ಅಡುಗೆ ಅನಿಲ: 855.50 ರೂ, 5 ಕಿಲೋ ಅಡುಗೆ ಅನಿಲ: 318.50 ರೂ, 19 ಕಿಲೋ ವಾಣಿಜ್ಯ ಸಿಲಿಂಡರ್: 1,764.50 (110.50 ರೂ ಏರಿಕೆ), 47.5 ಕಿಲೋ ವಾಣಿಜ್ಯ ಸಿಲಿಂಡರ್: 4,407 ರೂ (274.50 ರೂ ಏರಿಕೆ)..,

ಬಹಳ ತಿಂಗಳುಗಳಿಂದ ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚೇನೂ ಏರಿಕೆ ಆಗಿಲ್ಲ. 14.2 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಕಳೆದ 1-2 ವರ್ಷದಲ್ಲಿ ಹೆಚ್ಚಳ ಆಗಿರುವುದು ಸುಮಾರು 50 ರೂ ಮಾತ್ರವೇ.

ದೇಶಾದ್ಯಂತ ವಿವಿಧ ನಗರಗಳಲ್ಲಿ 19 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ (ಜ. 1ಕ್ಕೆ) – ದೆಹಲಿ : 1,691.50 ರೂ, ಕೋಲ್ಕತಾ : 1,684 ರೂ, ಮುಂಬೈ : 1,642.50 ರೂ, ಬೆಂಗಳೂರು : 1,764.60 ರೂ, ಪಾಟ್ನಾ : 1,953 ರೂ, ಲಕ್ನೋ : 1,814 ರೂ, ಗುರುಗ್ರಾಮ್ : 1,708.50 ರೂ, ಭೋಪಾಲ್ ; 1,696 ರೂ, ನೋಯ್ಡಾ : 1,691 ರೂ..,

ಕಮರ್ಷಿಯಲ್ ಗ್ಯಾಸ್ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ. ಅಡುಗೆ ವೆಚ್ಚ ಏರಿಕೆಯಾಗಿ, ಅಂತಿಮವಾಗಿ ಗ್ರಾಹಕರಿಗೆ ಊಟದ ಬಿಲ್​ನಲ್ಲಿ ಏರಿಕೆ ಆಗುತ್ತದೆ.