ಮನೆ ಸುದ್ದಿ ಜಾಲ ಹೊಸ ವರ್ಷಾಚರಣೆ; ಹೂವಿನಿಂದ ಸಿಂಗಾರಗೊಂಡ ಧರ್ಮಸ್ಥಳ

ಹೊಸ ವರ್ಷಾಚರಣೆ; ಹೂವಿನಿಂದ ಸಿಂಗಾರಗೊಂಡ ಧರ್ಮಸ್ಥಳ

0

ಮಂಗಳೂರು : 2026ರ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹೂವಿನ ಅಲಂಕಾರದಿಂದ ಸಿಂಗಾರಗೊಂಡಿದೆ. ಮಂಜುನಾಥ ಸ್ವಾಮಿಯ ಸನ್ನಿಧಾನ ವಿವಿಧ ಬಗೆಯ ಹೂವಿನಿಂದ ಅಲಂಕೃತಗೊಂಡಿದೆ.

ಪ್ರತಿ ಬಾರಿ ಹೊಸ ವರ್ಷಕ್ಕೆ ಹರಕೆಯ ರೂಪದಲ್ಲಿ ಬೆಂಗಳೂರಿನ ಭಕ್ತರಿಂದ ಅಲಂಕಾರ ಸೇವೆ ನಡೆಯುತ್ತಿದ್ದು, ಈ ಬಾರಿಯೂ ಬೆಂಗಳೂರಿನ ಗೋಪಾಲ್ ರಾವ್ ಹಾಗೂ ಆನಂದ ರಾವ್ ಬಳಗದವರಿಂದ ಹೂವಿನ ಸೇವೆ ಸಲ್ಲಿಸಲಾಗಿದೆ.

ದೇವಸ್ಥಾನದ ಒಳಾಂಗಣ, ಹೊರಾಂಗಣ, ಬೀಡು ಹೆಗ್ಗಡೆಯವರ ನಿವಾಸ ಹಾಗೂ ಕಟ್ಟಡಗಳನ್ನು ವಿವಿಧ ಜಾತಿಯ ಹೂಗಳನ್ನು ಮತ್ತು ಎಲೆಗಳನ್ನು ಬಳಸಿ ಆಕರ್ಷಕ ವಿನ್ಯಾಸಗೊಳಿಸಲಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ.

ಹಳದಿ ಸೇವಂತಿಗೆ, ಬಿಳಿ ಸೇವಂತಿಗೆ, ಕೆಂಪು ಸೇವಂತಿಗೆ, ಗುಲಾಬಿ ಬಟನ್, ರೋಸ್‌ಪೆಟಲ್ಸ್, ಸುಗಂಧರಾಜ ಮೊದಲಾದ ಹೂವುಗಳಿಂದ ಹಾಗೂ ಸೇಬು, ಮುಸಂಬಿ ಮತ್ತು ಕಿತ್ತಳೆ ಮೊದಲಾದ ಹಣ್ಣುಗಳು, ವಿವಿಧ ಜಾತಿಯ ಎಲೆಗಳನ್ನು ಬಳಸಿ ಅಲಂಕಾರ ಮಾಡಲಾಗಿದೆ. ಕಳೆದ ನಾಲ್ಕು ದಿನಗಳಿಂದ 150 ಸ್ವಯಂಸೇವಕರು ಅಲಂಕಾರ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ.