ಮನೆ ರಾಜ್ಯ ಮೈಸೂರಿನ ಹಳೆಯ ಕೋರ್ಟ್‌ ಕಟ್ಟಡಕ್ಕೆ ಬಾಂಬ್‌ ಬೆದರಿಕೆ..!

ಮೈಸೂರಿನ ಹಳೆಯ ಕೋರ್ಟ್‌ ಕಟ್ಟಡಕ್ಕೆ ಬಾಂಬ್‌ ಬೆದರಿಕೆ..!

0

ಮೈಸೂರು : ಕಳೆದ ಕೆಲದಿನಗಳ ಹಿಂದೆ ಹೀಲಿಯಂ ಬ್ಲ್ಯಾಸ್ಟ್‌ನಿಂದ ಸದ್ದಾಗಿದ್ದ ಮೈಸೂರು, ಈಗ ಮತ್ತೊಂದು ಸುದ್ದಿಯಾಗಿದೆ. ಮೈಸೂರಿನ ಹಳೆಯ ಕೋರ್ಟ್‌ಗೆ ಬಾಂಬ್‌ ಬ್ಲ್ಯಾಸ್ಟ್‌ ಮಾಡುವ ಬೆದರಿಕೆಯ ಇ-ಮೇಲ್‌ ಬಂದಿದೆ.

ಇಂದು (ಮಂಗಳವಾರ) ಬೆಳಿಗ್ಗೆ 10ಗಂಟೆ ಸುಮಾರಿಗೆ ಇ-ಮೇಲ್‌ ಬಂದಿದ್ದು, ನ್ಯಾಯಾಧೀಶರು ಹಾಗೂ ಕಕ್ಷಿದಾರರು ಮತ್ತು ವಕೀಲರು ಎಲ್ಲರೂ ಕೋರ್ಟ್‌ ಆವರಣದಿಂದ ವಾಪಸ್‌ ಹೋಗಿದ್ದಾರೆ. ಈ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಈ ಸ್ಥಳಕ್ಕೆ ಬಾಂಬ್‌ ತಪಾಸಣಾ ದಳ ಹಾಗೂ ಶ್ವಾನ ದಳ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಹಿರಿಯ ಪೊಲೀಸ್‌ ಲಾಟ್ಕರ್‌ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಹಳೇ ಕೋರ್ಟ್‌ ಮುಂದೆ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ನಿಯೋಜನೆಗೊಂಡಿದ್ದು, ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಮುನ್ನಚ್ಚರಿಕೆ ಕ್ರಮವಾಗಿ ರಸ್ತೆಗಳನ್ನು ಬಂದ್‌ ಮಾಡಿ ಹೆಚ್ಚಿನ ಪರಿಶೀಲನೆ ನಡೆಸಲಾಗಿದೆ.