ಬೆಂಗಳೂರು : ಮನರೇಗಾ ಯೋಜನೆಯಲ್ಲಿ 11 ಲಕ್ಷ ಕೋಟಿ ಅಕ್ರಮ ನಡೆದಿದ್ದರೆ ಸಿಬಿಐ ತನಿಖೆಗೆ ವಹಿಸಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್, ಪ್ರಹ್ಲಾದ್ ಜೋಶಿ ಆರೋಪಕ್ಕೆ ತಿರುಗೇಟು ನೀಡಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನರೇಗಾ ಯೋಜನೆಯಲ್ಲಿ 11 ಲಕ್ಷ ಕೋಟಿ ಅಕ್ರಮ ನಡೆದಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದರು.
ಆ ಮನರೇಗಾಗೂ ಈ ಮನರೇಗಾಗೂ ಏನಿದೆ ಅಂತ ಚರ್ಚೆ ಮಾಡೋಕೆ ಹೇಳಿ. ದಿನಾಂಕ ಫಿಕ್ಸ್ ಮಾಡೋಣ, ಜನರಿಗೂ ಜಾಗೃತಿ ಮೂಡಿಸಬೇಕು. ಅವರ ಪಾರ್ಟಿಯ ಅಧ್ಯಕ್ಷ, ವಿರೋಧ ಪಕ್ಷದ ನಾಯಕ ಅಥವಾ ಕೇಂದ್ರ ಸರ್ಕಾರದ ನಾಯಕರು ಚರ್ಚೆಗೆ ಬರೋಕೆ ಹೇಳಿ. ಯಾವುದಾದರೂ ಟಿವಿನಲ್ಲಿ ಡಿಬೇಟ್ ಮಾಡೋಕೆ ಹೇಳಿ. ಅಲ್ಲೇನಿದೆ ನಮ್ಮಲ್ಲೇನಿದೆ ಅಂತ ಚರ್ಚೆ ಆಗಲಿ ಎಂದರು.
11 ಲಕ್ಷ ಕೋಟಿ ಇದ್ರೆ ಸಿಬಿಐ ತನಿಖೆಗೆ ವಹಿಸೋಕೆ ಹೇಳಿ. ಮನರೇಗಾ ವಿಚಾರದಲ್ಲಿ ಎರಡು ದಿನ ಸ್ಪೆಷಲ್ ಸೆಷನ್ ಮಾಡೋಕೆ ತೀರ್ಮಾನಿಸಿದ್ದೀವಿ. ವ್ಯಾಪಾಕವಾಗಿ ಚರ್ಚೆ ಮಾಡುತ್ತೇವೆ, ಬಿಜೆಪಿ ಅವರು ಅಪಪ್ರಚಾರ ಮಾಡೋಕೆ ಹೊರಟಿದ್ದಾರೆ. ಅವರ ಕಾರ್ಯಕ್ರಮ ಏನೇನಿದೆ ಅವರು ಹೇಳಲಿ, ನಮ್ಮ ಕಾರ್ಯಕ್ರಮ ನಾವು ಹೇಳ್ತೀವಿ. ಈ ಕಾರ್ಯಕ್ರಮ ದಿಂದ ಜನರಿಗೆ ಏನಾಗುತ್ತದೆ ಅನ್ನೋದನ್ನ ನಾವೂ ತಿಳಿಸುತ್ತೇವೆ ಎಂದು ತಿಳಿಸಿದರು.














