ಮನೆ ರಾಷ್ಟ್ರೀಯ ವರ್ಷದಲ್ಲೇ ಅತ್ಯಂತ ಕನಿಷ್ಠ – 4.2° ಸೆಲ್ಸಿಯಸ್‌ಗೆ ಕುಸಿದ ತಾಪಮಾನ

ವರ್ಷದಲ್ಲೇ ಅತ್ಯಂತ ಕನಿಷ್ಠ – 4.2° ಸೆಲ್ಸಿಯಸ್‌ಗೆ ಕುಸಿದ ತಾಪಮಾನ

0

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ವರ್ಷದಲ್ಲೇ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಶನಿವಾರ (ಇಂದು) ದೆಹಲಿಯಲ್ಲಿ ಕನಿಷ್ಠ ತಾಪಮಾನ 4.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಹಲವು ವಿಮಾನಗಳ ಹಾರಾಟದಲ್ಲೂ ವ್ಯತ್ಯಯ ಕಂಡುಬಂದಿದೆ. ಹವಾಮಾನ ಇಲಾಖೆ ಪ್ರಕಾರ, ಇದು ಋತುವಿನ ಸರಾಸರಿಗಿಂತಲೂ 2.7 ಡಿಗ್ರಿಗಿಂತಲೂ ಕಡಿಮೆ ಎಂದು ಹೇಳಿದೆ.

2024ರ ಜನವರಿ 15 ರಂದು ಕನಿಷ್ಠ ತಾಪಮಾನ 3.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. ನಂತರದ ದಿನಗಳಲ್ಲಿ ಇದು ಅತ್ಯಂತ ಕನಿಷ್ಠ ತಾಪಮಾನ ಆಗಿದೆ. ದೆಹಲಿಯ ಸಫ್ದರ್ಜಂಗ್‌ ಪ್ರದೇಶದಲ್ಲಿ 4.2° ಸೆಲ್ಸಿಯಸ್‌, ಪಾಲಂನಲ್ಲಿ 4.5 ° ಸೆಲ್ಸಿಯಸ್‌, ಲೋಧಿ ರಸ್ತೆಯಲ್ಲಿ 4.7° ಸೆಲ್ಸಿಯಸ್‌, ರಿಡ್ಜ್‌ನಲ್ಲಿ 5.3° ಸೆಲ್ಸಿಯಸ್‌ ಮತ್ತು ಅಯನಗರದಲ್ಲಿ 4.5° ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಶುಕ್ರವಾರ ಋತುವಿನ 2ನೇ ಅತ್ಯಂತ ಕನಿಷ್ಠ 4.6° ಸೆಲ್ಸಿಯಸ್‌ ದಾಖಲಾಗಿತ್ತು. ಇದಕ್ಕೂ ಮುನ್ನ ಡಿ.4 ರಂದು 5.6 ಡಿಗ್ರಿ ಸೆಲ್ಸಿಯಸ್‌, ಡಿಸೆಂಬರ್‌ 1 ರಂದು 5.7 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿತ್ತು. ದೆಹಲಿಯಲ್ಲಿ ದಟ್ಟ ಮಂಜಿನಿಂದ ಗೋಚರತೆ ಕಡಿಮೆಯಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ದೆಹಲಿ ಏರ್‌ಪೋರ್ಟ್‌ ಹಲವಾರು ವಿಮಾನ ಹಾರಾಟದಲ್ಲಿ ವ್ಯತ್ಯಯ ಕಂಡುಬಂದಿದೆ.