ಮನೆ ರಾಜ್ಯ ಆಕ್ಸಿಡೆಂಟ್ ವಲಯವಾಗುತ್ತಿದೆ, ಬೆಂಗಳೂರಿನ ರಿಂಗ್‌ ರೋಡ್‌ ಫ್ಲೈಓವರ್..!

ಆಕ್ಸಿಡೆಂಟ್ ವಲಯವಾಗುತ್ತಿದೆ, ಬೆಂಗಳೂರಿನ ರಿಂಗ್‌ ರೋಡ್‌ ಫ್ಲೈಓವರ್..!

0

ಬೆಂಗಳೂರು : ಈಗಾಗಲೇ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ಜೊತೆ ಅಪಘಾತಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಅದರಲ್ಲೂ ರಿಂಗ್ ರೋಡ್ ಫ್ಲೈ ಓವರ್ ಆಕ್ಸಿಡೆಂಟ್ ಝೋನ್ ವಲಯವಾಗುತ್ತಿದೆ.

ಗೊರಗುಂಟೆಪಾಳ್ಯದಿಂದ ನಾಯಂಡಹಳ್ಳಿಗೆ ಸಂಪರ್ಕ ಕಲ್ಪಿಸುವ ಈ ಫ್ಲೈ ಓವರ್‌ ಮೇಲೆ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಆದರೆ ನಮ್ಮೂರ ತಿಂಡಿಗೆ ಬರುವ ಮಾರ್ಗದ ಮೇಲೆ ತಿರುವ ಇರುವ ಕಾರಣ ವೇಗ ನಿಯಂತ್ರಣಕ್ಕೆ ಹಂಪ್ಸ್ ಅಳವಡಿಕೆ ಮಾಡಲಾಗಿದೆ.

ಈ ಹಂಪ್ಸ್‌ ಬಗ್ಗೆ ಬಗ್ಗೆ ವಾಹನ ಸವಾರರಿಗೆ ಯಾವುದೇ ಮಾಹಿತಿ ಇಲ್ಲ. ಸೂಚನಾ ಫಲಕವಿಲ್ಲದ ಕಾರಣ ಅದರಲ್ಲೂ ರಾತ್ರಿಯಲ್ಲಿ ಬರುವ ವಾಹನ ಚಾಲಕರು ಹಂಪ್ಸ್‌ ಗೊತ್ತಾಗದೇ ಡಿವೈಡರ್‌ಗಳಿಗೆ ಗುದ್ದುತ್ತಿದ್ದಾರೆ. ಕೆಲ ವಾಹನಗಳು ಸ್ಕೀಡ್ ಆಗಿ ಬೀಳುತ್ತಿದ್ದು ಇದರಿಂದ ಸರಣಿ ಅಪಘಾತಗಳಾಗುತ್ತಿವೆ.

ಈ ಅಪಘಾತಗಳಿಂದಾಗಿ ರಸ್ತೆಯ ಮಧ್ಯದ ಡಿವೈಡರ್ ಒಡೆದು ಬಿದ್ದಿದೆ. ವಾರಕ್ಕೆ ಕನಿಷ್ಠ 3 ಅಪಘಾತಗಳು ನಡೆಯುತ್ತಲೇ ಇರುತ್ತದೆ. ರಾತ್ರಿ ಹೊತ್ತು ಆಗುವ ಗದ್ದಲಗಳಿಂದ ಸುತ್ತಮುತ್ತಲಿನ ಮನೆಯವರಿಗೆ ನಿದ್ದೆಯಾಗ್ತಿಲ್ಲ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ. ಸ್ಪೀಡ್ ಲಿಮಿಟ್ ಕ್ಯಾಮೆರಾ ಅಳವಡಿಕೆ, ರಿಫ್ಲೆಕ್ಟ್ ಲೈಟ್ ಅಳವಡಿಕೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.