ಮನೆ ರಾಜ್ಯ ಸಿಎಂ ಎದುರೇ ಜನ ನನ್ನ ಪರ ಕೂಗಿದ್ದು, ಕಾಂಗ್ರೆಸ್-ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ – ಯತ್ನಾಳ್

ಸಿಎಂ ಎದುರೇ ಜನ ನನ್ನ ಪರ ಕೂಗಿದ್ದು, ಕಾಂಗ್ರೆಸ್-ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ – ಯತ್ನಾಳ್

0

ವಿಜಯಪುರ : ಸಿಎಂ ಸಿದ್ದರಾಮಯ್ಯ ಎದುರೇ ಜನರು ನನ್ನ ಪರ ಕೂಗಿದ್ದು ಕಾಂಗ್ರೆಸ್, ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಕಾಂಗ್ರೆಸ್ ಜಿಲ್ಲಾ ನಾಯಕರಿಗೆ ಡಿಕೆಶಿ ಕ್ಲಾಸ್ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ಎದುರೇ ಜನ ನನ್ನ ಪರವಾಗಿ ಕೂಗೂ ಹಾಕಿದರೆ ಜಿಲ್ಲೆಯ ನಾಯಕರು ಏನ್ ಮಾಡಬೇಕು. ಸಿಎಂ ಎದುರು ಜನ ನನ್ನ ಪರ ಕೂಗಿದ್ದು ಕಾಂಗ್ರೆಸ್, ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ.

ಜನರು ನನ್ನನ್ನು ಬೆಂಬಲಿಸಿದ್ದಾರೆ. ಅದು ನನ್ನ ಮೇಲಿರುವ ಅಭಿಮಾನ. ಜನರ ಪ್ರೀತಿ, ವಿಶ್ವಾಸಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ. ನಮ್ಮನ್ನ, ಪ್ರತಾಪ್ ಸಿಂಹ ಅವರನ್ನು ಬಿಟ್ಟರೆ ಹುಷಾರ್ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. ಸಿಎಂ ಕಾರ್ಯಕ್ರಮದಲ್ಲಿ ಹೊಗಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಅಲ್ಲ, ಅವರು ರಾಜ್ಯದ ಸಿಎಂ. ಮುಖ್ಯಮಂತ್ರಿ ನಮ್ಮ ಕ್ಷೇತ್ರಕ್ಕೆ ಬಂದಾಗ ಗೌರವ ಸಲ್ಲಿಸಬೇಕು. ಹೀಗಾಗಿ ನಾನು ಗೌರವ ಸಲ್ಲಿಸಿದ್ದೇನೆ.

ಇದಕ್ಕೆ ಕೆಲವರಿಗೆ ನೋವಾದ್ರೆ ನಾನೇನು ಮಾಡೋಕಾಗಲ್ಲ. ನಾನು ಸಿದ್ದರಾಮಯ್ಯ ಅವರಿಗೆ ಗೌರವ ನೀಡಿದಂತೆ ಕಾಂಗ್ರೆಸ್‌ನವರು ಸಹ ಪ್ರಧಾನಿಗೆ ಗೌರವ ನೀಡುತ್ತಾರೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಬಿಜೆಪಿ ರಾಜಾಧ್ಯಕ್ಷ ವಿಳಂಬ ವಿಚಾರವಾಗಿ ಮಾತನಾಡಿ, ಹೈಕಮಾಂಡ್ ನಾಯಕರಿಗೆ ಎಲ್ಲವೂ ಗೊತ್ತಿದೆ. ಯಾರಿಗೆ ಯಾವಾಗ ಏನು ಕೊಡಬೇಕು ಎಂದು ಗೊತ್ತಿದೆ. ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದಿದ್ದಾರೆ.

ಬಳ್ಳಾರಿ ಗಲಾಟೆ ವಿಚಾರವನ್ನು ಸಿಐಡಿ ಬದಲಿ ಸಿಬಿಐ ತನಿಖೆಗೆ ನೀಡಬೇಕು. ಆಡಿಯೋ, ವಿಡಿಯೋ ಸಾಕ್ಷಿಯಾಗಿ ಪರಿಗಣಿಸೋದಿಲ್ಲ. ಎಐ ತಂತ್ರಜ್ಞಾನದ ಮೂಲಕ ನಕಲಿ ಮಾಡಬಹುದು. ರಾಜ್ಯದಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಲೀನ್ ಅಪ್ ಚಿಟ್ ನೀಡಬಹುದು. ಹೀಗಾಗಿ ಬಳ್ಳಾರಿ ಗಲಾಟೆ ಬಗ್ಗೆ ಸಿಬಿಐ ತನಿಖೆ ಮಾಡುವಂತೆ ಆಗ್ರಹಿಸಿದ್ದಾರೆ.