ಮನೆ ರಾಜ್ಯ 2025ರಲ್ಲಿ ಕೋಟಿ ಪ್ರಯಾಣಿಕರ ಓಡಾಟ – ದಾಖಲೆ ಬರೆದ ಬೆಂಗಳೂರು ವಿಮಾನ ನಿಲ್ದಾಣ

2025ರಲ್ಲಿ ಕೋಟಿ ಪ್ರಯಾಣಿಕರ ಓಡಾಟ – ದಾಖಲೆ ಬರೆದ ಬೆಂಗಳೂರು ವಿಮಾನ ನಿಲ್ದಾಣ

0

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಹತ್ವದ ಸಾಧನೆ ಬರೆದಿದೆ. 2025ರಲ್ಲೇ 4.3 ಕೋಟಿ ಪ್ರಯಾಣಿಕರು ಓಡಾಟ ನಡೆಸಿದ್ದು, ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆಯಲ್ಲಿ 8% ಹೆಚ್ಚಳವಾಗಿದೆ. 2025ರಲ್ಲಿ 4.3 ಕೋಟಿ ಪ್ರಯಾಣಿಕರು ಓಡಾಟ ನಡೆಸಿದ್ದು, ಪ್ರಯಾಣಿಕರ ಸೇವೆ, ಕಾರ್ಯಕ್ಷಮತೆ, ಸರಕು ಹಾಗೂ ಸಾಗಾಣೆಯು ಏರಿಕೆಯಾಗಿದೆ. ಈ ಮೂಲಕ 2025ರಲ್ಲೇ ಪ್ರಯಾಣಿಕರು ಮತ್ತು ಸರಕು ಎರಡರಲ್ಲೂ ದಾಖಲೆಯ ಬೆಳವಣಿಗೆಯಾಗಿದೆ.

ಕಳೆದ ವರ್ಷಕ್ಕಿಂತ ಈ ವರ್ಷ 8% ಏರಿಕೆಯಾಗಿದೆ. ಇದರಲ್ಲಿ 28.7% ಅಂತಾರಾಷ್ಟ್ರೀಯ ಪ್ರಯಾಣಿಕರು ಸಂಚರಿಸಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ನಿರ್ಗಮನಗಳು 38ರಿಂದ 51ಕ್ಕೆ ಹೆಚ್ಚಳವಾಗಿವೆ.

2025 ನವೆಂಬರ್ 23ರಂದು 1,37,317 ಪ್ರಯಾಣಿಕರು ಬೆಂಗಳೂರಿನಿಂದ ತೆರಳುವ ಮೂಲಕ ದಾಖಲೆ ನಿರ್ಮಿಸಿದೆ. 2025ರ ಅಕ್ಟೋಬರ್ 19ರಂದು ಗರಿಷ್ಠ 837 ಏರ್ ಟ್ರಾಫಿಕ್ ಮೂವ್‌ಮೆಂಟ್‌ಗಳಾಗಿದ್ದು, 5,20,985 ಟನ್‌ಗಳನ್ನು ನಿರ್ವಹಿಸಿದೆ.

ಈ ಮೂಲಕ 5% ಬೆಳವಣಿಗೆ ಹಾಗೂ ಒಂದೇ ದಿನ 2,207 ಟನ್‌ಗಳಷ್ಟು ಅತ್ಯಧಿಕ ಸರಕುಗಳನ್ನು ಸಾಗಾಟ ಮಾಡಿದೆ. ವಿಮಾನ ನಿಲ್ದಾಣವು 5 ದೇಶೀಯ ಮತ್ತು 5 ಅಂತಾರಾಷ್ಟ್ರೀಯ ಸೇರಿ ಒಟ್ಟು 10 ಹೊಸ ಮಾರ್ಗಗಳನ್ನು ಸೇರಿಸಿಕೊಂಡಿದೆ.