ಮನೆ ರಾಜ್ಯ ನಟ ಯಶ್ ಬರ್ತಡೇಗೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ ಎಫ್‌ಐಆರ್‌

ನಟ ಯಶ್ ಬರ್ತಡೇಗೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ ಎಫ್‌ಐಆರ್‌

0

ಬೆಂಗಳೂರು : ನಟ ಯಶ್ ಬರ್ತಡೇಗೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ ವೇಣು ಕ್ರಿಯೇಶನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಜ.8ರಂದು ನಟ ಯಶ್ ಹುಟ್ಟುಹಬ್ಬದ ಹಿನ್ನೆಲೆ ಗಾಲ್ಫ್ ಕ್ಲಬ್ ಮುಂದೆ ಅವರ ಮನೆಯ ಎದುರು ಬ್ಯಾನರ್ ಹಾಕಲಾಗಿತ್ತು. ಹುಟ್ಟುಹಬ್ಬ ಶುಭಕೋರಿ ಹಾಕಲಾಗಿದ್ದ ಸಾಕಷ್ಟು ಫ್ಲೆಕ್ಸ್‌ಗಳನ್ನು ಹಾಕಿಸಲಾಗಿತ್ತು. ಈ ಹಿನ್ನೆಲೆ ಜಿಬಿಎ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ವೇಣು ಕ್ರಿಯೇಶನ್ ಅವರನ್ನು ಆರೋಪಿತರನ್ನಾಗಿ ಉಲ್ಲೇಖಿಸಿದ್ದು, ದೂರಿನನ್ವಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.