ಮನೆ ರಾಜ್ಯ ಅಮೃತಗೌಡಗೆ ಬೆದರಿಕೆ – ಫೋನ್‌ ಸ್ವಿಚ್‌ ಆಫ್‌ ಮಾಡಿ, ಕೈ ನಾಯಕ ರಾಜೀವ್‌ ಗೌಡ ಪರಾರಿ..!

ಅಮೃತಗೌಡಗೆ ಬೆದರಿಕೆ – ಫೋನ್‌ ಸ್ವಿಚ್‌ ಆಫ್‌ ಮಾಡಿ, ಕೈ ನಾಯಕ ರಾಜೀವ್‌ ಗೌಡ ಪರಾರಿ..!

0

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಕಾಂಗ್ರೆಸ್‌ ನಾಯಕ ರಾಜೀವ್ ಗೌಡ ಈಗ ಪರಾರಿಯಾಗಿದ್ದಾರೆ. ಅಮೃತಗೌಡ ಮತ್ತು ಶಿಡ್ಲಘಟ್ಟ ಜೆಡಿಎಸ್ ತಾಲೂಕು ಅಧ್ಯಕ್ಷ ಶ್ರೀನಿವಾಸಗೌಡ ದೂರಿನ ಮೇರೆಗೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಪ್ರಕರಣ ದಾಖಲಾಗುತ್ತಿದ್ದಂತೆ ರಾಜೀವ್‌ ಗೌಡ ಎರಡು ಮೊಬೈಲ್‌ ಫೋನ್‌ಗಳನ್ನು ಸ್ವಿಚ್‌ ಆಫ್‌ ಮಾಡಿ ನಾಪತ್ತೆಯಾಗಿದ್ದಾರೆ. ಈಗ ರಾಜೀವ್ ಗೌಡ ಬಂಧನಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಎರಡು ತಂಡಗಳನ್ನು ನೇಮಿಸಿದ್ದು ಸೆನ್‌ ಪೊಲೀಸರು ಈಗ ಶೋಧ ನಡೆಸುತ್ತಿದ್ದಾರೆ.

ಅಮೃತ ಗೌಡ ದೂರು – ಯಾವ ಬಿಎನ್‌ಎಸ್‌ ಸೆಕ್ಷನ್‌ ಅಡಿ ಕೇಸ್‌?
132 – ಸರ್ಕಾರಿ ಕೆಲಸಕ್ಕೆ ಅಡ್ಡಿ ಹಾಗೂ ಬೆದರಿಕೆ
351(3) – ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ, ಮಹಿಳೆಯ ಚಾರಿತ್ರ್ಯವಧೆ
56 – ಅಪರಾಧಕ್ಕೆ ಪ್ರಚೋದನೆ ಅಥವಾ ಪ್ರೇರಣೆ
224 – ಸರ್ಕಾರಿ ನೌಕರನಿಗೆ ದೈಹಿಕ ಅಥವಾ ಮಾನಸಿಕವಾಗಿ ಗಾಯ ಮಾಡುವ ಬೆದರಿಕೆ
352 – ಶಾಂತಿ ಭಂಗಕ್ಕೆ ಪ್ರಚೋದನೆ ನೀಡುವ ಉದ್ದೇಶದಿಂದ ಅವಮಾನ

ಶ್ರೀನಿವಾಸಗೌಡ ದೂರು – ಯಾವ ಸೆಕ್ಷನ್‌ ಅಡಿ ಕೇಸ್‌?
352 – ಶಾಂತಿ ಭಂಗಕ್ಕೆ ಪ್ರಚೋದನೆ ನೀಡುವ ಉದ್ದೇಶದಿಂದ ಅವಮಾನ
353(2) – ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿ ವದಂತಿ ಪ್ರಸಾರ