ಮನೆ ಕಾನೂನು ದೇಶದ ಜನರ ಎದುರು ಕ್ಷಮೆಯಾಚಿಸಿ: ನೂಪುರ ಶರ್ಮಾಗೆ  ಸುಪ್ರೀಂಕೋರ್ಟ್ ತಪರಾಕಿ

ದೇಶದ ಜನರ ಎದುರು ಕ್ಷಮೆಯಾಚಿಸಿ: ನೂಪುರ ಶರ್ಮಾಗೆ  ಸುಪ್ರೀಂಕೋರ್ಟ್ ತಪರಾಕಿ

0

ನವದೆಹಲಿ(New Delhi):  ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಇಡೀ ದೇಶದ ಕ್ಷಮೆಯಾಚಿಸುವಂತೆ ಸೂಚನೆ ನೀಡಿದೆ.

ನೂಪುರ ಶರ್ಮಾ ಹೇಳಿಕೆಯಿಂದ ದೇಶದ ಭದ್ರತೆಗೆ ಧಕ್ಕೆಯಾಗಿದೆ. ಲೂಸ್ ಟಾಕ್ ನಿಂದ ದೇಶಕ್ಕೆ ಬೆಂಕಿ ಬಿದ್ದಿದೆ. ನೀವು ಭಾವನೆಗಳಿಗೆ ಕಿಡಿ ಹೊತ್ತಿಸಿದ್ದೀರಿ.  ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಗೆ ನೀವೇ ಕಾರಣ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನೂಪುರ್ ಶರ್ಮಾ ಹೇಳಿಕೆಯಿಂದಲೇ ಉದಯಪುರದಲ್ಲಿ  ಘಟನೆ ನಡೆಯಿತು. ಬೇಜವಾಬ್ದಾರಿ ಹೇಳಿಕೆಯೇ ಘಟನೆಗೆ ಕಾರಣ. ಹೇಳಿಕೆ ಹಿಂಪಡೆಯುವುದು ಲೇಟಾಯಿತು. ಪ್ರವಾದಿ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.